ಬೆಂಗಳೂರು,ಜೂ23(DaijiworldNews/AZM):ಐಎಂಎ ಕಂಪನಿಯ ಬಹುಕೋಟಿ ವಂಚನೆ ಪ್ರಕರಣದ ಪ್ರಮುಖ ಅರೋಪಿ ಮನ್ಸೂರ್ ಖಾನ್ ದುಬೈಯಿಂದ ಹೊಸ ವಿಡಿಯೋವನ್ನು ಬಿಡುಗಡೆ ಮಾಡಿದ್ದಾನೆ. ಹಾಗೂ ವೀಡಿಯೋದಲ್ಲಿ ಹಲವು ರಾಜಕಾರಣಿಗಳ ಹೆಸರನ್ನು ಬಹಿರಂಗಪಡಿಸಿದ್ದಾನೆ.
ನನಗೆ ಸಾಕಷ್ಟು ಮಂದಿಯಿಂದ ತೊಂದರೆಯಾಗಿದೆ ಎಂದು ವೀಡಿಯೋದಲ್ಲಿ ಹೇಳಿದ ಆತ, ತಾನು ಆಲೋಕ್ ಕುಮಾರ್ ಅವರ ಎದುರು ಶರಣಾಗುವ ಬಗ್ಗೆ ಹೇಳಿಕೊಂಡಿದ್ದಾನೆ. ಇದೇ ವೇಳೆ ಕೆಲ ರಾಜಕಾರಣಿಗಳ ಹೆಸರಗಳನ್ನು ಕೂಡ ವಿಡಿಯೋದಲ್ಲಿ ಮನ್ಸೂರ್ ಹೇಳಿಕೊಂಢಿದ್ದು, ಸಿಬಿಐಗೆ ನನ್ನ ಪ್ರಕರಣವನ್ನು ವಹಿಸವುಂತೆ ಒತ್ತಾಯಿಸಿದ್ದಾನೆ. ಇನ್ನು ಸದ್ಯ ಮನ್ಸೂರ್ ಸದ್ಯ ದುಬೈನಲ್ಲಿದ್ದು, ದುಬೈನಿಂದ ನಾನು ಭಾರತಕ್ಕೆ ಬರುವುದಕ್ಕೆ ಸಾಕಷ್ಟು ಕಷ್ಟವಾಗುತ್ತಿದ್ದು, ನಾನು ಇಲ್ಲಿ ಬರಬಾರದಾಗಿತ್ತು ಅಂತ ಕಣ್ಣೀರಿಟ್ಟಿದ್ದಾನೆ. ನಮ್ಮ ಸಂಸ್ಥೆಯ ಮ್ಯಾನ್ಮೇಜ್ಮೆಂಟ್ ಬಗ್ಗೆ ನನಗೆ ನಂಬಿಕೆ ಇಲ್ಲ. ಇದಲ್ಲದೇ ನಾನು ಭಾರತಕ್ಕೆ ವಾಪಸು ಬರಬೇಕು ಅಂತ ಬಯಸಿದ್ದೇನೆ ಅಂತ ಹೇಳಿಕೊಂಡಿದ್ದಾರೆ. ನಾನು ಭಾರತಕ್ಕೆ ಬಂದರೆ ನನ್ನ ಕೊಲೆಯಾಗುತ್ತದೆ. ಹೀಗಾಗಿ ನನಗೆ ಭಯವಿದೆ ಎಂದು ಮನ್ಸೂರು ಹೇಳಿಕೊಂಡಿದ್ದಾನೆ.
ಇನ್ನು ನಾನು ಭಾರತಕ್ಕೆ ಬಂದರೆ ತನಿಖೆ ವೇಳೆಯಲ್ಲಿ ಪೊಲೀಸರ ಮುಂದೆ ಎಲ್ಲವನ್ನು ಹೇಳಿಕೊಂಡಿದ್ದಾನೆ. ಹೂಡಿಕೆದಾರ ಹಣವನ್ನು ವಾಪಸ್ಸು ನೀಡುವುದಕ್ಕೆ ನಾನು ಸಿದ್ದನಿದ್ದು, ನಾನು ಜುಲೈ ೧೪ರಂದು ಭಾರತಕ್ಕೆ ಬರುವುದಕ್ಕೆ ಸಿದ್ದನಿದೆ, ಆದರೆ ನನ್ನ ಪಾಸ್ಪೋರ್ಟ್ ಅಮಾನತ್ತು ಆಗಿರುವ ಕಾರಣ ನಾನು ಭಾರತಕ್ಕೆ ಬರಲು ಸಾಧ್ಯವಾಗುತ್ತಿಲ್ಲ.
ಜಮೀರ್ ಖಾನ್ ನನಗೆ ಸಹಾಯ ಮಾಡುವುದಾಗಿ ಹೇಳಿದರೆ. ಆದರೆ ಇನ್ನು ಜಮೀರ್ ಆಹ್ಮದ್ ಖಾನ್ ನನಗೆ ಸಹಾಯ ಮಾಡುವುದಕ್ಕೆ ಸಾಧ್ಯವಿಲ್ಲ ಅಂತ ಹೇಳಿರುವ ಮನ್ಸೂರು, ನೀವು ನನ್ನ ಸಾಯಿಸುತ್ತೀರಾ, ನನ್ನ ನೀವು ಸಾಯಿಸಿದರು ಪರವಾಗಿಲ್ಲ. ನನ್ನಿಂದ ಯಾರೆಲ್ಲ ಹಣವನ್ನು ಪಡೆದುಕೊಂಡಿದ್ದಾರೋ ಅವರ ಹೆಸರನ್ನು ಬಹಿರಂಗ ಪಡಿಸುವೆ ಎಂದು ತಿಳಿಸಿದ್ದಾನೆ.