ಚೆನ್ನೈ, ಜು. 11 (DaijiworldNews/AA): ಭಾರತದ ಯಾವುದೇ ರಚನೆಗೆ ಹಾನಿಯಾಗಿರುವ ಬಗ್ಗೆ ಒಂದೇ ಒಂದು ಫೋಟೋವನ್ನ ತೋರಿಸಲಿ. ವಿದೇಶಿ ಮಾಧ್ಯಮಗಳು ಪಾಕಿಸ್ತಾನ ಹೇಳಿರುವ ಬರೀ ಸುಳ್ಳು ಸುದ್ದಿಗಳನ್ನೇ ಬಿತ್ತರಿಸಿವೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ವಾಗ್ದಾಳಿ ನಡೆಸಿದ್ದಾರೆ.

ತಮಿಳುನಾಡಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಬಗ್ಗೆ ವಿದೇಶಿ ಮಾಧ್ಯಮಗಳು ಮಾಡಿದ ವರದಿಯನ್ನ ತೀವ್ರವಾಗಿ ಖಂಡಿಸಿದ ಅವರು, "ವಿದೇಶಿ ಮಾಧ್ಯಮಗಳು ಭಾರತೀಯ ಯಾವುದೇ ರಚನೆಗೆ ಹಾನಿಯಾಗಿರುವುದನ್ನು ತೋರಿಸುವಲ್ಲಿ ವಿಫಲವಾಗಿವೆ. ಬರೀ ಸುಳ್ಳು ಸುದ್ದಿಗಳನ್ನೇ ಹರಡಿವೆ ಎಂದು ವಾಗ್ದಾಳಿ ನಡೆಸಿದರಲ್ಲೇ ಭಾರತಕ್ಕೆ ಯಾವುದೇ ಹಾನಿಯಾಗಿಲ್ಲ" ಎಂದು ತಿಳಿಸಿದರು.
"ಭಾರತೀಯ ಸೇನಾಪಡೆಗಳ ಕಾರ್ಯಾಚರಣೆಯನ್ನು ಶ್ಲಾಘಿಸಿದ ಅವರು, ನಮ್ಮ ಸಶಸ್ತ್ರ ಪಡೆಗಳು ನಿಖರ ಗುರಿಗಳನ್ನು ಹೊರತುಪಡಿಸಿ ಬೇರೆಲ್ಲಿಯೂ ದಾಳಿ ಮಾಡಲಿಲ್ಲ. ಶತ್ರು ಪ್ರದೇಶದಲ್ಲಿರುವ ಭಯೋತ್ಪಾದಕ ಶಿಬಿರಗಳ ಮೇಲಷ್ಟೇ ದಾಳಿ ಮಾಡಿದವು. ಭಾರತದ ಈ ಪ್ರತೀಕಾರದ ದಾಳಿಯಲ್ಲಿ 100ಕ್ಕೂ ಹೆಚ್ಚು ಉಗ್ರರು ಹತರಾದರು. 23 ನಿಮಿಷಗಳ ಕಾಲ ಸಂಪೂರ್ಣ ಕಾರ್ಯಾಚರಣೆ ನಡೆದಿತ್ತು" ಎಂದು ಹೇಳಿದರು.
"ವಿದೇಶಿ ಮಾಧ್ಯಮಗಳು ಪಾಕಿಸ್ತಾನ ಹೇಳಿದ ಹಾಗೆ ಸುದ್ದಿಯನ್ನು ಬಿತ್ತರಿಸಿವೆ. ಭಾರತ ರಚನೆಗಳಿಗೆ ಹಾನಿಯಾಗಿರುವ ಬಗ್ಗೆ ಒಂದೇ ಒಂದು ಫೋಟೋ ನನಗೆ ತೋರಿಸಲಿ. ಒಂದೇ ಒಂದು ಗಾಜನ್ನು ಸಹ ಒಡೆದಿಲ್ಲ. ವಿದೇಶಿ ಮಾಧ್ಯಮಗಳು ಹಲವು ವಿಷಯಗಳನ್ನ ಪ್ರಕಟಿಸಿವೆ. ಕೆಲವು ಆಯ್ದ ಚಿತ್ರಗಳ ಆಧಾರದ ಮೇಲೆ ಅವರು ಪಾಕ್ನ 13 ವಾಯುನೆಲೆಗಳ ಬಗ್ಗೆ ಹಲವು ವಿಷಯಗಳನ್ನ ಹೇಳಿದ್ದಾರೆ. ಆದರೆ ಮೇ 10ರ ಮೊದಲು ಮತ್ತು ನಂತರ ಪಾಕಿಸ್ತಾನದ ಸರ್ಗೋಧಾ, ರಹೀಮ್ ಯಾರ್ ಖಾನ್, ಚಕ್ಲಾಲಾ ಸೇರಿದಂತೆ 13 ವಾಯುನೆಲೆಗಳ ಉಪಗ್ರಹ ಚಿತ್ರಗಳನ್ನು ನೋಡಿದ್ರೆ ಎಲ್ಲವೂ ಸ್ಪಷ್ಟವಾಗುತ್ತದೆ. ಈ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ವಾಯುನೆಲೆಗಳಿಗೆ ಹಾನಿಯಾಗಿರೋದು ಸ್ಪಷ್ಟವಾಗುತ್ತದೆ" ಎಂದು ವಿವರಿಸಿದರು.