ಬೆಂಗಳೂರು,ಜೂ24(DaijiworldNews/AZM): ಐಎಂಎ ಜ್ಯುವೆಲ್ಸ್ ಹಗರಣದಲ್ಲಿ ಯಾರು ಯಾರು ಎಷ್ಟೆಷ್ಟು ಹಣ ತಿಂದಿದ್ದಾರೆ ಎಂದು ಗೊತ್ತಾಗಲೇಬೇಕು ಎಂದು ಆಹಾರ ಸಚಿವ ಜಮೀರ್ ಅಹಮದ್ ಅವರು ವಿಕಾಸಸೌಧದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಭಾನುವಾರ ಬಿಡುಗಡೆ ಮಾಡಿದ ವಿಡಿಯೋದಲ್ಲಿ ಕೆಲವರ ಹೆಸರನ್ನು ಮನ್ಸೂರ್ ಅಲಿ ಖಾನ್ ಹೇಳಿದ್ದಾನೆ. ಎಸ್ ಐ ಟಿ ತನಿಖೆ ನಡೆಸುತ್ತೆ. ಯಾರು ಅವನ ಬಳಿ ದುಡ್ಡು ತಿಂದಿದ್ದಾರೆ, ಅದು ಗೊತ್ತಾಗಬೇಕು ಎಂದರು.
ಅವನು ಹೇಳಿದ ರೀತಿ 1350 ಕೋಟಿ ಹಣ ಇದೆ ಅಂತ ಹೇಳಿದ್ದಾನೆ. ನನಗೆ ಬಂದ ಮಾಹಿತಿ ಪ್ರಕಾರ 2000 ಕೋಟಿ ಹಣ ನೀಡಬೇಕಾಗಿದೆ. ಮನ್ಸೂರ್ ಖಾನ್ ಗೆ ಪೊಲೀಸರು ರಕ್ಷಣೆ ಕೊಡಲಿದ್ದಾರೆ. ಎಸ್.ಐಟಿ ತನಿಖೆಯಲ್ಲಿ ನಮ್ಮದೇನೂ ಪಾತ್ರವಿಲ್ಲ ಎಂದು ಸಚಿವರು ತಿಳಿಸಿದರು.
ಆ ಬಗ್ಗೆ ಗೃಹಸಚಿವರು ಸಿಎಂ ವರದಿ ಪಡೆಯುತ್ತಾರೆ. ಪೊಲೀಸರು ತನಿಖೆ ಮಾಡುತ್ತಿದ್ದಾರೆ. ನಮ್ಮ ಪೊಲೀಸ್ ಅಧಿಕಾರಿಗಳ ಮೇಲೆ ತನಿಖೆ ಮೇಲೆ ನನಗೆ ನಂಬಿಕೆ ಇದೆ . ಒಂದು ವೇಳೆ ಎಸ್ಐಟಿಯಿಂದ ತನಿಖೆ ನ್ಯಾಯ ಸಿಗಲಿಲ್ಲ ಎಂದಾದರೆ ನಾನು ಸಿಬಿಐಗೆ ಶಿಫಾರಸು ಮಾಡುತ್ತೇನೆ. ಬಡವರ ದುಡ್ಡು ಅವರಿಗೆ ತಲುಪಿಸುವ ವಿಶ್ವಾಸ ನನಗಿದೆ. ಅವರೇ ಹೇಳುವಂತೆ ಅವರ ಬಳಿ ಇರುವ ಆಸ್ತಿ ಮಾರಿ ಹಣ ಹಂಚಲು ಅವರೇ ಸಿದ್ದ ಎಂದು ಹೇಳಿಕೊಂಡಿದ್ದಾರೆ ಎಂದು ಜಮೀರ್ ಅಹಮದ್ ತಿಳಿಸಿದ್ದಾರೆ.