ನವದೆಹಲಿ, ಜೂ 25 (Daijiworld News/MSP): ನಾವಿಟ್ಟ ನಿಖರ ಗುರಿಗೆ ಪಾಕಿಸ್ತಾನದ ಬಾಲಾಕೋಟ್ ನಲ್ಲಿದ್ದ ಎಲ್ಲ ಉಗ್ರ ಕ್ಯಾಂಪ್ ಗಳು ಯಶಸ್ವಿಯಾಗಿ ಛಿದ್ರವಾಗಿದೆ ಎಂದು ಭಾರತೀಯರು ವಾಯುಸೇನೆಯ ಏರ್ ಸ್ಟ್ರೈಕ್ ನಲ್ಲಿ ಭಾಗಿಯಾಗಿದ್ದ ಪೈಲಟ್ ಗಳು ಹೇಳಿದ್ದಾರೆ.
ರಾಷ್ಟ್ರೀಯ ಮಾಧ್ಯಮವೊಂದಕ್ಕೆ ಏರ್ ಸ್ಟ್ರೈಕ್ ನಲ್ಲಿ ಭಾಗಿಯಾಗಿದ್ದ ಪೈಲಟ್ ಗಳು ಸಂದರ್ಶನವೊಂದು ನೀಡಿದ್ದು ಇದರಲ್ಲಿ ಈ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ. ಜೈಷ್ ಇ ಮೊಹಮದ್ ಉಗ್ರಗಾಮಿ ಸಂಘಟನೆಯ ಉಗ್ರರು ಅಡಗಿದ್ದ ಬಾಲಾಕೋಟ್ ನಲ್ಲಿನ ಕ್ಯಾಂಪ್ ಗಳು ನಮ್ಮ ದಾಳಿಯ ಗುರಿಗಳಾಗಿತ್ತು. ನಮ್ಮ ಮೇಲಾಧಿಕಾರಿಗಳು ನೀಡಿದ ಆದೇಶದಂತೆ ನಾವು ಪಾಕಿಸ್ತಾನ ಆಕ್ರಮಿತ ಗಡಿಯೊಳಗೆ ನುಗ್ಗಿ ನಮಗೆ ನೀಡಲಾಗಿದ್ದ ಗುರಿಗಳನ್ನು ಅತ್ಯಂತ ನಿಖರವಾಗಿ ಮತ್ತು ಯಶಸ್ವಿಯಾಗಿ ಧ್ವಂಸ ಮಾಡಿದ್ದೇವೆ ಎಂದು ಹೇಳಿದ್ದಾರೆ.
ನಮ್ಮ ಈ ಕಾರ್ಯಾಚರಣೆಯ ಅವಧಿ ಸುಮಾರು ಎರಡು ಗಂಟೆಗಳಷ್ಟು ದೀರ್ಘವಾಗಿತ್ತು. ಉಗ್ರತಾಣಗಳನ್ನು ಉಡಾಯಿಸಲು ನಾವು ಸ್ಪೈಸ್ 2000 ಉಪಗ್ರಹ ನಿಯಂತ್ರಿತ ಬಾಂಬ್ ಗಳನ್ನು ಬಳಸಿದ್ದೆವು. ಇದರ ವಿಶೇಷತೆ ಎಂದರೆ, ಇದು ಎಂತಹ ಪ್ರತಿಕೂಲ ಹವಾಮಾನದಲ್ಲೂ ತನ್ನ ಗುರಿಗಳ ಮೇಲೆ ಅದು ನಿಖರ ದಾಳಿ ಮಾಡುವಂತಹ ಬಾಂಬ್ ಗಳಾಗಿದೆ ಎಂದು ವಿವರಿಸಿದ್ದಾರೆ.
ನಮಗೆ ನೀಡಿರುವ ಕೆಲಸ ವ್ಯಾಪ್ತಿ ತಿಳಿದ ಬಳಿಕ ನಾವು ಒತ್ತಡಕ್ಕೆ ಒಳಗಾಗಿದ್ದೆವು ಮತ್ತು ಇದಕ್ಕಾಗಿ ಸಾಕಷ್ಟುಸಿಗರೇಟ್ ಸೇದಿದ್ದೆವು ಎಂದು ದಾಳಿ ಬಗ್ಗೆ ವಿವರಿಸಿದ್ದಾರೆ.