ಬೆಂಗಳೂರು,ಆ. 04 (DaijiworldNews/AK): ಮತಗಳ್ಳತನದ ಬಗ್ಗೆ ರಾಹುಲ್ ಗಾಂಧಿ ದಾಖಲಾತಿಗಳನ್ನು ಅದನ್ನು ಬಿಡುಗಡೆ ಮಾಡುತ್ತಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ರಾಹುಲ್ ಗಾಂಧಿ ಪ್ರತಿಭಟನೆ ಮಾಡುವ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ರಾಹುಲ್ ಗಾಂಧಿ ಮತಗಳವು ಬಗ್ಗೆ ಹೇಳಿದ್ದರು. ಅದರ ಬಗ್ಗೆ ಇಂದು ಸುದ್ದಿಗೋಷ್ಠಿ ಮಾಡಬೇಕಿತ್ತು. ಆದರೆ ಜಾರ್ಖಂಡ್ ಸಿಎಂ ಶಿಬು ಸೊರೇನ್ ಅವರು ತೀರಿಕೊಂಡಿದ್ದಾರೆ. ಹಾಗಾಗಿ ಸುದ್ದಿಗೋಷ್ಠಿ ಮುಂದೂಡಿಕೆಯಾಗಿರಬಹುದು. ಇಲ್ಲದಿದ್ದರೆ ದಾಖಲೆ ಬಿಡುಗಡೆ ಮಾಡುತ್ತಿದ್ದರು ಎಂದು ತಿಳಿಸಿದರು.
ರಾಹುಲ್ ಗಾಂಧಿ ಪ್ರತಿಭಟನೆ ಮಾಡುತ್ತಾರೆ. . ನಿಮಗೆ ಏನು ದಾಖಲೆ ಬೇಕು ಕೊಡುತ್ತಾರೆ. ನಿಮ್ಮ ಮುಂದೆ ಬರುವಾಗ ದಾಖಲಾತಿ ಇಟ್ಟುಕೊಂಡು ಬರೋದು. ಮತಗಳುವು ಹೇಗೆ ಆಗಿದೆ ಎಂದು ಸಾಕ್ಷ್ಯಗಳಿವೆ. ಲೀಗಲ್ ಆಗಿಯೇ ನಾವು ಪ್ರೂವ್ ಮಾಡ್ತೇವೆ. ಸುಮ್ಮನೆ ಸುದ್ದಿಗೋಷ್ಠಿ ಮಾಡಿದರೆ ಪ್ರಯೋಜನವೇನು? ದಾಖಲೆ ಇರೋದರಿಂದ ಮಾಡುತ್ತೀರುವುದು ಎಂದು ಸ್ಪಷ್ಟಪಡಿಸಿದರು.
ನಾನು ಎಲೆಕ್ಷನ್ ಕಮೀಷನ್ಗೆ ದೂರು ಕೊಟ್ಟಿದ್ದೇನೆ. ಅದಕ್ಕೆ ಇನ್ನೂ ಆಯೋಗ ಉತ್ತರ ಕೊಟ್ಟಿಲ್ಲ. ಜಗತ್ತಿನಲ್ಲಿ ತಾಂತ್ರಿಕತೆಯಲ್ಲಿ 4ನೇ ಸ್ಥಾನ ನಮ್ಮದು. ಯಾಕೆ ಆಯೋಗ ನಮ್ಮ ಪ್ರಶ್ನೆಗೆ ಉತ್ತರ ಕೊಡ್ತಿಲ್ಲ. ಇವಿಎಂ ಬಗ್ಗೆ ಈಗಲೂ ನಮ್ಮ ಅಭಿಪ್ರಾಯ ಒಂದೇ. ಬಿಜೆಪಿ ಅವರ ಚಿಲುಮೆ ಟ್ರಸ್ಟ್ ಪ್ರಕರಣ ನೆನಪಿದ್ಯಾ? ಬೇರೆ ಬೇರೆ ಪ್ರಕರಣ ಇಲ್ಲವೇ. ನೋಡೋಣ ಎಲ್ಲವೂ ಹೊರಗೆ ಬರಲಿದೆ ಎಂದರು.