ಮದ್ಯಪ್ರದೇಶ, ಜೂ 26 (Daijiworld News/MSP): ಅಕ್ರಮ ಒತ್ತುವರಿ ಕಾರ್ಯಾಚರಣೆಯ ನಡೆಸುತ್ತಿದ್ದ ಮಹಾನಗರ ಪಾಲಿಕೆ ಅಧಿಕಾರಿಯೊಬ್ಬರನ್ನು ಬಿಜೆಪಿ ಶಾಸಕ ಅಕಾಶ್ ವಿಜಯವರ್ಗಿಯ ಬ್ಯಾಟ್ ನಿಂದ ಥಳಿಸಿದ ಘಟನೆ ನಡೆದಿದೆ.
ಇಂದೋರ್ ನಲ್ಲಿ ಈ ಘಟನೆ ನಡೆದಿದ್ದು ಬ್ಯಾಟ್ ನಿಂದ ಥಳಿಸಿದ, ಶಾಸಕ ಅಕಾಶ್ ವಿಜಯವರ್ಗಿಯ ಬಿಜೆಪಿ ಹಿರಿಯ ಮುಖಂಡ ಕೈಲಾಸ್ ವಿಜಯವರ್ಗಿಯ ಅವರ ಪುತ್ರರಾಗಿದ್ದಾರೆ.
ಅಧಿಕಾರಿ ಮೊಬೈಲ್ ನಲ್ಲಿ ಸಂಭಾಷಣೆ ನಡೆಸುತ್ತ ವೇಳೆ ಏಕಾಏಕಿ ಕ್ರಿಕೆಟ್ ಬ್ಯಾಟ್ ಹಿಡಿದು ಬಿಜೆಪಿ ಶಾಸಕ ಅಧಿಕಾರಿಗೆ ಥಳಿಸಿದ್ದಾರೆ. ಈ ಎಲ್ಲ ಘಟನೆಗಳು ಸ್ಥಳದಲ್ಲಿದ್ದ ಮಾಧ್ಯಮದ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಕ್ರಮಗಳನ್ನು ನಿರ್ಮಿಸಲಾಗಿದ್ದ ಕಟ್ಟಡವನ್ನು ತೆರವುಗೊಳಿಸಲು ಪುರಸಭೆಯ ಅಧಿಕಾರಿ ಸ್ಥಳದಲ್ಲಿದ್ದರು ಎಂದು ತಿಳಿದುಬಂದಿದೆ.
ಶಾಸಕ ಆಕಾಶ್ ವಿಜಯವರ್ಗೀಯ ಮತ್ತು ಅವರ ಬೆಂಬಲಿಗರು ಹಲ್ಲೆ ನಡೆಸುತ್ತಿದ್ದಂತೆಯೇ ಸ್ಥಳದಲ್ಲಿದ್ದ ಪೊಲೀಸರ ತಂಡ ತಕ್ಷಣ ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ.