ಬೆಂಗಳೂರು,ಜೂ26(DaijiworldNews/AZM): ಕನ್ನಡದಲ್ಲಿಯೇ ಐಬಿಪಿಎಲ್ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಸಂಸದ ತೇಜಸ್ವಿ ಸೂರ್ಯ ಅವರು ಸಂಸತ್ ನಲ್ಲಿ ಒತ್ತಾಯಿಸಿದ್ದು, ಇದಕ್ಕೆ ಕೆಪಿಸಿಸಿ ಮಾಧ್ಯಮ ಸಂಚಾಲಕ, ಎ ಎನ್ ನಟರಾಜ್ ಗೌಡ ಟ್ವಿಟರ್ ನಲ್ಲಿ ತಿರುಗೇಟು ನೀಡಿದ್ದಾರೆ.
ಈ ಕುರಿತು ಟ್ವಿಟ್ ಮಾಡಿರುವ ಕೆಪಿಸಿಸಿ ಮಾಧ್ಯಮ ಸಂಚಾಲಕ ನಟರಾಜ್ ಗೌಡ, ಸಂಸದರಾದ ತೇಜಸ್ವಿ ಸೂರ್ಯ ಮಾತನಾಡುವ ಮೊದಲು ಒಂದಷ್ಟು ಮಾಹಿತಿ ಪಡೆದುಕೊಳ್ಳಿ. ಗ್ರಾಮೀಣ ಬ್ಯಾಂಕಿಂಗ್ ಪರೀಕ್ಷೆಯನ್ನು ಕನ್ನಡದಲ್ಲೇ ಬರೆಯಲು ಅವಕಾಶ 2014ರಲ್ಲೇ ಇತ್ತು ಎಂದು ತಿಳಿಸಿದ್ದಾರೆ.
ಆದರೇ ಹೀಗೆ 2014ರಲ್ಲಿ ಕನ್ನಡದಲ್ಲಿಯೇ ಪರೀಕ್ಷೆ ಬರೆಯುವ ಅವಕಾಶವನ್ನು ರದ್ದು ಮಾಡಿದ್ದು, ಬಿಜೆಪಿ ಸರ್ಕಾರ. ಈ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳಿ. ನಿಮಗೆ ಕನ್ನಡಿಗರ ಬಗ್ಗೆ ಅಷ್ಟು ಕಾಳಜಿ ಇದ್ದರೇ, ಕೇಂದ್ರ ಸರ್ಕಾರದ ಬಲವಂತದ ಹಿಂದಿ ಭಾಷಾ ಹೇರಿಕೆ ವಿರೋಧಿಸಿ ಎಂದು ಟ್ವಿಟರ್ ನಲ್ಲಿ ಎ ಎಲ್ ನಟರಾಜ್ ಗೌಡ ತಿರುಗೇಟು ನೀಡಿದ್ದಾರೆ.