ರಾಯಚೂರು,ಜೂ.26(DaijiworldNews/AZM): ಸಿಎಂ ಇದೀಗ ತಮ್ಮ ಗ್ರಾಮವಾಸ್ತವ್ಯದ ವೇಳೆ ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಲು ಮುಂದಾಗಿದ್ದಾರೆ.
ರಾಯಚೂರು ಜಿಲ್ಲೆಯಲ್ಲಿ ಇಂದು ಗ್ರಾಮವಾಸ್ತವ್ಯ ಮುಗಿಸಿದ ಸಿಎಂ ನಾಳೆ ಬೀದರ್ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಹೀಗಾಗಿ ರಾಯಚೂರಿನಿಂದ ಬೀದರ್ಗೆ ಹೋಗಲು ಹೆಲಿಕಾಪ್ಟರ್ ಬದಲು ರಸ್ತೆ ಮಾರ್ಗವಾಗಿ ಹೋಗಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ರಾಯಚೂರಿನಿಂದ ಬೀದರ್ಗೆ ರಸ್ತೆ ಮಾರ್ಗವಾಗಿ ತೆರಳಲು ಕನಿಷ್ಠ ಪಕ್ಷ ಐದಾರು ಗಂಟೆ ತಗುಲುತ್ತದೆ. ಹೀಗಾಗಿ ಹೆಲಿಕಾಪ್ಟರ್ನಲ್ಲಿ ಹೋಗುವುದು ಉತ್ತಮ ಎಂದು ಅಧಿಕಾರಿಗಳು ಸಿಎಂ ಅವಗಾಹನೆಗೆ ತಂದರು. ಆಗ ಸಿಎಂ ಕುಮಾರಸ್ವಾಮಿ ಅವರು, ಯಾವ ಕಾರಣಕ್ಕೂ ಹೆಲಿಕಾಪ್ಟರ್ ಬೇಡ. ವಿನಾಕಾರಣ ಖರ್ಚು ಬೇಡ. ಬೆಳಿಗ್ಗೆ 5 ಗಂಟೆಗೆ ಕಾರಿನಲ್ಲಿ ಹೊರಡಲು ಸಿದ್ಧತೆ ಮಾಡಿ ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ನಾಳೆ ಬೆಳಿಗ್ಗೆ ಐದು ಗಂಟೆಗೆ ಸಿಎಂ ರಾಯಚೂರಿನಿಂದ ಕಾರಿನಲ್ಲಿ ಪ್ರಯಾಣ ಬೆಳಸಲಿದ್ದಾರೆ. ಗುಲ್ಬರ್ಗದಲ್ಲಿ ಉಪಾಹಾರ ಸೇವಿಸಿ, ಅಲ್ಲಿಂದ ನೇರವಾಗಿ ಬಸವಕಲ್ಯಾಣಕ್ಕೆ ಪ್ರಯಾಣ ಮಾಡಲಿದ್ದಾರೆ. ಬಸಕಲ್ಯಾಣ ತಾಲೂಕಿನ ಉಜಿಳಾಂಬ ಗ್ರಾಮದಲ್ಲಿ ಸಿಎಂ ವಾಸ್ತವ್ಯ ಹೂಡಲಿದ್ದಾರೆ.