ನವದೆಹಲಿ,ಜೂ27(DaijiworldNews/AZM): ಮೋಟಾರು ವಾಹನ ಕಾಯ್ದೆ ತಿದ್ದುಪಡಿಗೆ ಕೇಂದ್ರ ಸರ್ಕಾರ ಮುಂದಾಗಿದ್ದು, ನೂತನ ನಿಯಮದಲ್ಲಿ ಆ್ಯಂಬುಲೆನ್ಸ್ ವಾಹನಕ್ಕೆ ಅಡ್ಡಿಪಡಿಸಿದರೆ ಬರೋಬ್ಬರಿ 10,000 ರೂಪಾಯಿ ದಂಡ ಹಾಕಲಾಗುತ್ತದೆ.
ಮೋಟಾರು ವಾಹನ ಕಾಯ್ದೆ ತಿದ್ದುಪಡಿಗೆ ರಾಜ್ಯಸಭೆ ಅಂಕಿತ ಬಾಕಿ ಇದೆ. ಶೀಘ್ರದಲ್ಲೇ ತಿದ್ದುಪಡಿಯೊಂದಿಗೆ ಮೋಟಾರು ವಾಹನ ಕಾಯ್ದೆ ಜಾರಿಯಾಗಲಿದೆ. ತಿದ್ದುಪಡಿ ಮಾಡಲಾಗಿರುವ ನಿಯಮಗಳಲ್ಲಿ ಇದೀಗ ಆ್ಯಂಬುಲೆನ್ಸ್ ವಾಹನಕ್ಕೆ ಅಡ್ಡಿಪಡಿಸುವವರ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ಕೇಂದ್ರ ಮುಂದಾಗಿದೆ. ತುರ್ತು ಸೇವೆ ವಾಹನದ ಮುಂದೆ ಚಲಿಸುವುದು, ಅಡ್ಡಿಪಡಿಸುವುದು ಮಾಡಿದರೆ 10,000 ರೂಪಾಯಿ ದಂಡ ಕಟ್ಟಬೇಕಾಗುತ್ತೆ.
ಆ್ಯಂಬುಲೆನ್ಸ್ ವಾಹನದ ಹಿಂಭಾಗದಲ್ಲಿ ಚಲಿಸುವುದು ಕೂಡ ನಿಯಮ ಬಾಹಿರ. ಹೀಗಾಗಿ ತಿದ್ದುಪಡಿ ನಿಯಮಗಳ ಕುರಿತು ಎಚ್ಚರವಹಿಸಿವುದು ಅಗತ್ಯ. ನಿಯಮ ಉಲ್ಲಂಘಿಸಿದರೆ ದೊಡ್ಡ ಮೊತ್ತವನ್ನು ದಂಡದ ರೂಪದಲ್ಲಿ ಕಟ್ಟಬೇಕಾಗುತ್ತದೆ.