ಬೆಂಗಳೂರು, ಜೂ 28 (Daijiworld News/SM): ಕರ್ನಾಟಕ ಮೋಟಾರು ವಾಹನ ಕಾಯ್ದೆಯ ಹೊಸನಿಯಮ ಜಾರಿಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಲಾಗಿದೆ. ಅದರಂತೆ ನಿಯಮ ಉಲ್ಲಂಘನೆಯ ದಂಡದ ದರವನ್ನು ಏರಿಕೆಗೊಳಿಸಿ ಸರಕಾರ ಆದೇಶ ಹೊರಡಿಸಿದೆ.
ಮಿತಿ ಮೀರಿದ ವೇಗದ ಚಾಲನೆಗೆ 1 ಸಾವಿರ ರೂಪಾಯಿ ದಂಡ, ವಾಹನ ಚಲಾಯಿಸುವಾಗ ಮೊಬೈಲ್ ಬಳಕೆ ಮಾಡಿದ್ದಲ್ಲಿ ಮೊದಲ ಬಾರಿಗೆ 1 ಸಾವಿರ ರೂಪಾಯಿ, ಎರಡನೇ ಬಾರಿಗೆ 2 ಸಾವಿರ ರೂಪಾಯಿ ದಂಡ ವಿಧಿಸಲು ಹೊಸ ಆದೇಶದಲ್ಲಿ ಅವಕಾಶ ಕಲ್ಪಿಸಲಾಗಿದೆ.
ಇನ್ನು ನೋಂದಣಿ ಇಲ್ಲದ ವಾಹನ ಚಲಾವಣೆಗೆ ಮೊದಲ ಬಾರಿಗೆ 5 ಸಾವಿರ ರೂಪಾಯಿ, ಎರಡನೇ ಬಾರಿಗೆ 10 ಸಾವಿರ ರೂಪಾಯಿ ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ ಪ್ರಯಾಣಿಕರ ಚಿಲ್ಲರೆ ಹಿಂತಿರುಗಿಸದ ಕಂಡಕ್ಟರ್ ಗೆ 500 ರೂಪಾಯಿ ದಂಡ ಸೇರಿದಂತೆ ಹೊಸ ಕಾನೂನುಗಳನ್ನು ಜಾರಿಗೊಳಿಸಿ ವಾಹನ ಸವಾರರಿಗೆ ರಾಜ್ಯ ಸರ್ಕಾರ ಶಾಕ್ ನೀಡಿದೆ.