ಜಬಲ್ಪುರ, ಸೆ. 05 (DaijiworldNews/AK): ಶುಭಾಂಗಿ ಯಾದವ್ ಎಂಬುವವರು ಜಬಲ್ಪುರದಲ್ಲಿ 5.2 ಕೆಜಿ ತೂಕದ ಆರೋಗ್ಯವಂತ ಗಂಡು ಶಿಶುವಿಗೆ ಜನ್ಮ ನೀಡಿದ್ದಾರೆ. ಇದು ವೈದ್ಯಲೋಕದ ಅಚ್ಚರಿ ಸಂಗತಿ ಎಂದೇ ಹೇಳಬಹುದು.

ಸಾಮಾನ್ಯವಾಗಿ ಶಿಶು 2.8ರಿಂದ 3.2 ಕೆಜಿ ತೂಕವಿರುತ್ತವೆ. ಆದರೆ ಈ ಮಹಿಳೆ 5.2 ಕೆಜಿ ತೂಕದ ಮಗುವಿಗೆ ಜನ್ಮಕೊಟ್ಟಿದ್ದಾರೆ. ಕುಟುಂಬದವರೆಲ್ಲರೂ ಇದು ಗಣೇಶನ ಆಶೀರ್ವಾದ ಎಂದೇ ಹೇಳುತ್ತಿದ್ದಾರೆ.
ನವಜಾತ ಶಿಶುವಿನ ಗಾತ್ರವು ದೊಡ್ಡದಾಗಲು ಒಂದು ಕಾರಣವೆಂದರೆ ಗರ್ಭಾವಸ್ಥೆಯಲ್ಲಿ ಶುಭಾಂಗಿ ಸೇವಿಸಿದ ಪೌಷ್ಟಿಕ ಆಹಾರ. ತಾಯಿ ಯಾವುದೇ ವಿಶೇಷ ಆಹಾರವನ್ನು ತಿನ್ನಲಿಲ್ಲ.ಬೇಳೆ, ಅನ್ನ, ರೊಟ್ಟಿ ಮತ್ತು ತರಕಾರಿಗಳನ್ನು ಒಳಗೊಂಡಂತೆ ನಿಯಮಿತ ಊಟವನ್ನು ಸೇವಿಸಿದ್ದರು.ಆದರೆ ಆರೋಗ್ಯಕರ ಜೀವನಶೈಲಿಯು ಸಕಾರಾತ್ಮಕವಾಗಿ ಸಹಾಯ ಮಾಡಿದೆ.
ಅಂತಹ ಸಂದರ್ಭಗಳಲ್ಲಿ ಸಿಸೇರಿಯನ್ ಹೆರಿಗೆ ಹೆಚ್ಚು ಸವಾಲಿನದಾಗಿದೆ, ಆದರೆ ವೈದ್ಯರು ತಾಯಿ ಮತ್ತು ಮಗುವಿಗೆ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಶಸ್ತ್ರಚಿಕಿತ್ಸೆಯನ್ನು ತೀರಾ ಎಚ್ಚರಿಕೆಯಿಂದ ಮಾಡಿದ್ದಾರೆ. ಇದು ನಮಗೆ ಸಂತಸದ ಕ್ಷಣ, ಗಣೇಶ ಹಬ್ಬದಂದೇ ಹೆರಿಗೆಯಾಗಿದೆ ಮತ್ತು ಮಗುವಿನ ಜನನವು ತಮ್ಮ ಕುಟುಂಬದಲ್ಲಿ ಜನಿಸಿದ ಗಣೇಶ ದೇವರ ಆಶೀರ್ವಾದ ಎಂದು ಭಾವಿಸುವುದಾಗಿ ಶುಭಾಂಗಿ ಹೇಳಿದ್ದಾರೆ.
ಜುಲೈನಲ್ಲಿ ಇಂದೋರ್ನ ಪಿಸಿ ಸೇಥಿ ಸಿವಿಲ್ ಆಸ್ಪತ್ರೆಯಲ್ಲಿ 5.43 ಕಿಲೋಗ್ರಾಂಗಳಷ್ಟು ತೂಕದ ಆರೋಗ್ಯವಂತ ಹೆಣ್ಣು ಮಗು ಜನಿಸಿತ್ತು.ಇದು ಮಧ್ಯಪ್ರದೇಶದ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ದಾಖಲಾದ ಅತ್ಯಂತ ಭಾರವಾದ ನವಜಾತ ಶಿಶುವಾಗಿದೆ.ಈ ಜನನವು 2021 ರಲ್ಲಿ ಮಾಂಡ್ಲಾ ಜಿಲ್ಲೆಯಲ್ಲಿ ಜನಿಸಿದ 5.1 ಕೆಜಿ ಮಗುವಿನ ಹಿಂದಿನ ದಾಖಲೆಯನ್ನು ಮೀರಿಸಿದೆ.