ನವದೆಹಲಿ, ಜೂ28(Daijiworld News/SS): ಕೆಲಸಕ್ಕಾಗಿ ಊರಿಂದ ಊರಿಗೆ ಓಡಾಡುವ ಮಹಿಳೆಯರಿಗೆ ರೈಲ್ವೆ ಇಲಾಖೆ ಅಗತ್ಯ ಭದ್ರತೆ ಒದಗಿಸಬೇಕು ಎಂದು ಮಂಡ್ಯ ಲೋಕಸಭೆ ಸದಸ್ಯೆ ಸುಮಲತಾ ಅಂಬರೀಷ್ ಮನವಿ ಮಾಡಿದ್ದಾರೆ.
ಬಜೆಟ್ಗೆ ಪೂರ್ವಭಾವಿಯಾಗಿ ಕೇಂದ್ರ ರೈಲ್ವೆ ಸಚಿವ ಪೀಯೂಶ್ ಗೋಯಲ್ ಅವರನ್ನು ಈಚೆಗೆ ಭೇಟಿ ಮಾಡಿದ ಮಂಡ್ಯ ಲೋಕಸಭೆ ಸದಸ್ಯೆ ಸುಮಲತಾ ಅಂಬರೀಷ್ ತಮ್ಮ ಕ್ಷೇತ್ರದ ಅಗತ್ಯಗಳನ್ನು ಸಚಿವರಿಗೆ ತಿಳಿಸಿದ್ದಾರೆ. ಈ ವೇಳೆ ಅವರು, ಮೈಸೂರು–ಮಂಡ್ಯ–ರಾಮನಗರ–ಬೆಂಗಳೂರು ಮಾರ್ಗದಲ್ಲಿ ಪ್ರತಿದಿನ ಸಂಚರಿಸುವ ಸಾವಿರಾರು ಮಹಿಳಾ ಕಾರ್ಮಿಕರ ಅನುಕೂಲಕ್ಕಾಗಿ ಮಹಿಳಾ ವಿಶೇಷ ರೈಲು ಓಡಿಸಬೇಕು ಎಂದು ವಿನಂತಿಸಿಕೊಂಡಿದ್ದಾರೆ.
ಕೆಲಸಕ್ಕಾಗಿ ಊರಿಂದ ಊರಿಗೆ ಓಡಾಡುವ ಮಹಿಳೆಯರಿಗೆ ರೈಲ್ವೆ ಇಲಾಖೆ ಅಗತ್ಯ ಭದ್ರತೆ ಒದಗಿಸಬೇಕು. ಮಹಿಳೆಯರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಬೆಳಿಗ್ಗೆ ಮತ್ತು ಸಂಜೆ ಮುಂಬೈ ಮಾದರಿಯಲ್ಲಿ ವಿಶೇಷ ಮಹಿಳಾ ರೈಲುಗಳನ್ನು ಓಡಿಸಬೇಕು ಎಂದು ಸಚಿವ ಪೀಯೂಶ್ ಗೋಯಲ್ ಅವರ ಬಳಿ ಕೋರಿದ್ದಾರೆ.