ನವದಹೆಲಿ, ಜೂ30(Daijiworld News/SS): ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ಹಲವೆಡೆ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆಯಾಗಿದೆ.
ಮೆಟ್ರೋ ನಗರಗಳಲ್ಲಿ ಪೆಟ್ರೋಲ್ ಲೀಟರ್ಗೆ 9 ರಿಂದ 10 ಪೈಸೆ ಏರಿಕೆಯಾಗಿದ್ದರೆ, ಡೀಸೆಲ್ ಬೆಲೆಯಲ್ಲೂ ಕೂಡ 8 ರಿಂದ 9 ಪೈಸೆ ಏರಿಕೆಯಾಗಿದೆ. ರಾಜ್ಯ ರಾಜಧಾನಿ ಬೆಂಗಳೂರು ಕೂಡ ಇಂಧನ ಬೆಲೆ ಏರಿಕೆಗೆ ಸಾಕ್ಷಿಯಾಗಿದ್ದು, ಲೀ. ಪೆಟ್ರೋಲ್ಗೆ 09 ಪೈಸೆ ಮತ್ತು ಲೀ. ಡೀಸೆಲ್ಗೆ 08 ಪೈಸೆ ಏರಿಕೆಯಾಗಿದೆ. ಏರಿಕೆ ಬಳಿಕ ಪೆಟ್ರೋಲ್ ಲೀ. 72.74 ರೂ.ಗಳಿಗೆ ಮಾರಾಟವಾಗುತ್ತಿದ್ದರೆ, ಡೀಸೆಲ್ ಲೀ.ಗೆ 66.35 ರೂ.ಗಳಿಗೆ ಮಾರಾಟವಾಗುತ್ತಿದೆ.
ನವದೆಹಲಿಯಲ್ಲೂ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆಯಾಗಿದೆ. ಲೀ. ಪೆಟ್ರೋಲ್ಗೆ 09 ಪೈಸೆ ಏರಿಕೆಯಾಗಿದ್ದು, 70.37ರೂ.ಗಳಷ್ಟಿದೆ. ಡೀಸೆಲ್ ಬೆಲೆಯಲ್ಲಿ 08 ಪೈಸೆ ಜಾಸ್ತಿಯಾಗಿದ್ದು, 64.19 ರೂ.ಗಳಿಗೆ ಮಾರಾಟವಾಗುತ್ತಿದೆ.
ಕೋಲ್ಕತದಲ್ಲೂ ಬೆಲೆ ಏರಿಕೆಯಾಗಿದ್ದು, ಪೆಟ್ರೋಲ್ ಲೀ.ಗೆ 09 ಪೈಸೆ ಏರಿಕೆಯಾಗಿ 72.63 ರೂ.ಗೆ ದೊರಕುತ್ತಿದೆ. ಡೀಸೆಲ್ ಲೀ.ಗೆ 08 ಪೈಸೆ ಏರಿಕೆಯಾಗಿ 66.11 ರೂ.ಗಳಷ್ಟಿದೆ. ಮುಂಬೈನಲ್ಲಿ 76.06 ರೂ.ಗೆ ಮಾರಾಟವಾಗುತ್ತಿರುವ ಪೆಟ್ರೋಲ್ 09 ಪೈಸೆ ಏರಿಕೆಯಾಗಿದೆ. ಡೀಸೆಲ್ ಲೀ.ಗೆ 08 ಪೈಸೆ ಏರಿಕೆಯಾಗಿ 66.11 ರೂ.ಗಳಷ್ಟಿದೆ.