ನವದಹೆಲಿ, ಜೂ30(Daijiworld News/SS): ಲಖನೌನಲ್ಲಿರುವ ಐತಿಹಾಸಿಕ ಇಮಾಂಬಾರ್ ದರ್ಗಾಗಳಿಗೆ ಭೇಟಿ ನೀಡಬೇಕಾದರೆ ತುಂಡುಡುಗೆಗಳನ್ನು ಧರಿಸಿ ಬರುವಂತಿಲ್ಲ. ಶಿಯಾ ಸಮುದಾಯದವರೊಂದಿಗೆ ಸಭೆ ನಡೆಸಿದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ.
ಲಖನೌನಲ್ಲಿರುವ ಐತಿಹಾಸಿಕ ದರ್ಗಾಗಳಿಗೆ ಭೇಟಿ ಕೊಡಬೇಕಾದರೆ ಇನ್ನು ಮುಂದೆ ಸಭ್ಯ ಉಡುಗೆ ತೊಟ್ಟು ಹೋಗುವುದು ಕಡ್ಡಾಯವಾಗಿದೆ. ಧಿರಿಸು ಸಭ್ಯವಾಗಿದ್ದರೆ ಮಾತ್ರ ಪ್ರವೇಶಾವಕಾಶ ನೀಡಲಾಗುತ್ತದೆ. ಚಿಕ್ಕ ಸ್ಕರ್ಟ್ಗಳು, ಮೈ ಕಾಣುವಂತ ಟಾಪ್ಗಳನ್ನು ಧರಿಸಿ ಬರುವವರಿಗೆ ಇಲ್ಲಿ ಪ್ರವೇಶವಿಲ್ಲ. ಮೈತುಂಬ ಬಟ್ಟೆ ಧರಿಸಿ ಬರಬೇಕು ಎನ್ನಲಾಗಿದೆ.
ಜೊತೆಗೆ, ಲಖನೌನಲ್ಲಿರುವ ಐತಿಹಾಸಿಕ ದರ್ಗಾಗಳಿಗಳಲ್ಲಿ ವೃತ್ತಿಪರ ವಿಡಿಯೋ ಶೂಟಿಂಗ್ ಹಾಗೂ ಫೋಟೋಗ್ರಫಿಯನ್ನೂ ನಿಷೇಧಿಸಲಾಗಿದೆ ಎಂದು ಲಖನೌ ಜಿಲ್ಲಾ ಮ್ಯಾಜಿಸ್ಟ್ರೇಟ್ ಕುಶಾಲ್ ರಾಜ್ ಶರ್ಮಾ ತಿಳಿಸಿದ್ದಾರೆ.
ತುಂಡುಡುಗೆ ಧರಿಸಿ ಬಂದರೂ ಅವರಿಗೆ ದರ್ಗಾಗಳಿಗೆ ಪ್ರವೇಶ ನೀಡುವುದಿಲ್ಲ. ಅಸಭ್ಯ ಬಟ್ಟೆಗಳು ಧಾರ್ಮಿಕ ಭಾವನೆಗೆಗಳಿಗೆ ಧಕ್ಕೆಯನ್ನುಂಟುಮಾಡುತ್ತವೆ. ಇಮಾಂಬಾರ್ ದರ್ಗಾಗಳು ಶಿಯಾ ಜನಾಂಗದ ಪವಿತ್ರ ಧಾರ್ಮಿಕ ಸ್ಥಳಗಳಾಗಿವೆ. ಅಸಭ್ಯ ನಡವಳಿಕೆಗಳು, ತುಂಡುಡುಗೆಗಳನ್ನು ಧರಿಸಿ ಬರುವವರನ್ನು ನೋಡಿ ಅಸಮಾಧಾನಗೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.
ಈ ನಿರ್ಧಾರ ಕೈಗೊಳ್ಳುವ ಮೊದಲು ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಭಾರತೀಯ ಪುರಾತತ್ವ ಇಲಾಖೆ ಮತ್ತು ಸ್ಥಳೀಯ ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದರು.