ಬೆಂಗಳೂರು,ಜೂ30(DaijiworldNews/AZM)- ಐಎಂಎ ವಂಚಕ ಮೊಹಮ್ಮದ್ ಮನ್ಸೂರ್ ಖಾನ್ನ ಆಪ್ತ ಮುಜಾಹಿದ್ನನ್ನು ಎಸ್ಐಟಿ ಬಂಧಿಸಿದೆ.
ಫ್ರೇಸರ್ಟೌನ್ ನಿವಾಸಿಯಾದ ಮುಜಾಹಿದ್ನ ಮನೆ ಮೇಲೆ ನಿನ್ನೆ ಎಸ್ಐಟಿ ಅಧಿಕಾರಿಗಳು ದಾಳಿ ಮಾಡಿ ಕೆಲವು ದಾಖಲೆಗಳನ್ನು ವಶ ಪಡಿಸಿಕೊಂಡು,ಆತನನ್ನು ವಿಚಾರಣೆಗೊಳಪಡಿಸಿದ್ದಾರೆ
ಈತ ಮೊಹಮ್ಮದ್ ಮನ್ಸೂರ್ ಖಾನ್ನ ಆಪ್ತ. ಮನ್ಸೂರ್ ದೇಶ ಬಿಟ್ಟು ಹೋಗುವಾಗ ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೊನೆಯದಾಗಿ ಮುಜಾಹಿದ್ ಭೇಟಿ ಮಾಡಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ.
ಮಹಮ್ಮದ್ ಮನ್ಸೂರ್ ಖಾನ್ ದೇಶ ಬಿಟ್ಟು ಹೋಗುವುದು ಗೊತ್ತಿದ್ದರೂ ಆ ವಿಷಯವನ್ನು ಪೊಲೀಸರಿಗೆ ಮುಜಾಹಿದ್ ತಿಳಿಸಿರಲಿಲ್ಲ. ಮನ್ಸೂರ್ನಿಂದ ಮುಜಾಹಿದ್ ಹಣ ಪಡೆದಿರುವ ಶಂಕೆ ಇದೆ. ಈ ಹಿನ್ನೆಲೆಯಲ್ಲಿ ಎಸ್ಐಟಿ ಬಂಧಿಸಿದೆ ಎಂದು ಡಿಸಿಪಿ ಗಿರೀಶ್ ಅವರು ತಿಳಿಸಿದ್ದಾರೆ.