ನವದೆಹಲಿ,ಜೂ30(DaijiworldNews/AZM): ಮುಸ್ಲಿಮೇತರ ವ್ಯಕ್ತಿಯನ್ನು ಮದುವೆಯಾಗಿ ಸದನದಲ್ಲಿ ಕುಂಕುಮ ತೊಟ್ಟು ಕಾಣಿಸಿಕೊಂಡ ಟಿಎಂಸಿ ಸಂಸದೆ ನುಸ್ರತ್ ವಿರುದ್ಧ ದರ್-ಉಲ್-ಉಲೂಮ್ ಫತ್ವಾ ಹೊರಡಿಸಿದ್ದು, ಇದಕ್ಕೆ ನುಸ್ರತ್ ತಿರುಗೇಟು ನೀಡಿದ್ದಾರೆ.
ದರ್-ಉಲ್-ಉಲೂಮ್ ಗೆ ತಿರುಗೇಟು ನೀಡಿರುವ ನುಸ್ರತ್, ನನ್ನ ಉಡುಗೆ ಬಗ್ಗೆ ಟೀಕಿಸುವ ಹಕ್ಕು ಯಾರಿಗೂ ಇಲ್ಲ ಎಂದು ತಿಳಿಸಿದ್ದಾರೆ.
ನುಸ್ರತ್ ಜೈನ್ ಉದ್ಯಮಿಯವನ್ನು ವಿವಾಹವಾಗಿದ್ದಾರೆ. ಇತ್ತೀಚೆಗೆ ಅವರು ಬಳೆ ತೊಟ್ಟು, ಹಣೆಗೆ ಕುಂಕುಮ ಇಟ್ಟು ಸಂಸತ್ತಿನಲ್ಲಿ ಕಾಣಿಸಿಕೊಂಡಿದ್ದರು. ಇದಕ್ಕೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದರೆ, ದರ್-ಉಲ್-ಉಲೂಮ್ ಸಂಘಟನೆ ನುಸ್ರತ್ ವಿರುದ್ಧ ಫತ್ವಾ ಹೊರಡಿಸಿದೆ.
ಇದಕ್ಕೆ ಉತ್ತರಿಸಿರುವ ನುಸ್ರತ್, “ಜಾತಿಗಳನ್ನು ಲೆಕ್ಕಿಸದೇ ನಾನು ಇಡೀ ದೇಶವನ್ನು ಪ್ರತಿನಿಧಿಸುತ್ತಿದ್ದೇನೆ. ನಾನು ಮುಸ್ಲಿಂ ಆಗಿಯೇ ಉಳಿಯುತ್ತೇನೆ. ನನ್ನ ಉಡುಗೆ ಬಗ್ಗೆ ಯಾರೊಬ್ಬರೂ ಟೀಕೆ ಮಾಡಬಾರದು,” ಎಂದು ಕೋರಿದ್ದಾರೆ. ಈ ಘಟನೆ ಬೆಳದ ಬೆನ್ನಲ್ಲೇ ನುಸ್ರತ್ ಅವರ ಬೆಂಬಲಕ್ಕೆ ಅನೇಕರು ನಿಂತಿದ್ದಾರೆ. ನುಸ್ರತ್ ಮಾಡಿರುವುದು ಸರಿಯಾಗಿದೆ. ಅದನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ ಎಂದಿದ್ದಾರೆ.
ಬೆಂಗಾಲಿ ನಟಿ ನುಸ್ರತ್ ಜಹಾನ್ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಿಂದ ಸ್ಪರ್ಧಿಸಿ ಗೆದ್ದಿದ್ದರು. ತೃಣಮೂಲ ಕಾಂಗ್ರೆಸ್ ನಿಂದ ಆಯ್ಕೆಯಾದ ಈ ನಟಿ ಒಂದೇ ತಿಂಗಳಲ್ಲಿ ಮದುವೆಯಾಗಿದ್ದರು. ಕೋಲ್ಕತಾ ಮೂಲದ ಉದ್ಯಮಿ ನಿಖಿಲ್ ಜೈನ್ ಅವರನ್ನು ವರಿಸಿದ್ದರು.