ನವದೆಹಲಿ,ಜೂ30(DaijiworldNews/AZM):ಬಿಸಿಲ ಬೇಗೆಯಲ್ಲಿ ತತ್ತರಿಸುತ್ತಿರುವ ದೆಹಲಿಯಲ್ಲಿ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಬೇಸಿಗೆ ರಜೆಯನ್ನು ವಿಸ್ತರಿಸಲಾಗಿದೆ. ಖಾಸಗಿ ಹಾಗೂ ಸರ್ಕಾರಿ ಶಾಲೆಗಳಿಗೆ ಬೇಸಿಗೆ ರಜೆಯನ್ನು ಜುಲೈ 8ರವರೆಗೆ ವಿಸ್ತರಿಸಿ ಸಿಎಂ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್ ಸರ್ಕಾರ ಆದೇಶ ಹೊರಡಿಸಿದೆ.
ಎಂಟನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಮಾತ್ರ ಈ ಆದೇಶ ಅನ್ವಯವಾಗಲಿದೆ. 9ರಿಂದ 12ನೇ ತರಗತಿಗೆ ಈ ಆದೇಶ ಅನ್ವಯಿಸುವುದಿಲ್ಲ. ನಿಗದಿತ ವೇಳಾಪಟ್ಟಿಯಂತೆಯೇ ಈ ತರಗತಿಗಳು ಆರಂಭವಾಗಲಿವೆ ಎಂದು ಎಂದು ಡಿಸಿಎಂ ಮತ್ತು ಶಿಕ್ಷಣ ಸಚಿವ ಮನೀಶ್ ಸಿಸೋಡಿಯಾ ಟ್ವೀಟ್ ಮಾಡಿದ್ದಾರೆ.
ಭಾರತದ ಅನೇಕ ಭಾಗಗಳಲ್ಲಿ ಬೇಸಿಗೆಯ ಬಿಸಿ ಉಚ್ಛ್ರಾಯ ಮಟ್ಟಕ್ಕೆ ಹೋಗಿದೆ. ಹಲವು ಕಡೆ ಉಷ್ಣಾಂಶ 50 ಡಿಗ್ರೀ ಗಡಿ ದಾಟಿದೆ. ಭಾರೀ ಬಿಸಿಗಾಳಿಗೆ ಜನರು ತತ್ತರಿಸಿಹೋಗಿದ್ದಾರೆ. ದೆಹಲಿಯಲ್ಲಿ ಮಾತ್ರ ಇನ್ನೂ ಕೆಲ ದಿನಗಳ ಕಾಲ ಬಿಸಿ ಗಾಳಿ ಮುಂದುವರಿಯಲಿದೆ. ಸದ್ಯ ಸಾಮಾನ್ಯಮಟ್ಟಕ್ಕಿಂತ 5 ಡಿಗ್ರಿಯಷ್ಟು ಅಧಿಕ ಉಷ್ಣಾಂಶ ದಾಖಲಾಗಿದೆ ಎನ್ನುತ್ತಿದೆ ಹವಾಮಾನ ಇಲಾಖೆ.