ಬೆಂಗಳೂರು, ಅ. 22 (DaijiworldNews/ TA): ಅಖಿಲ ಭಾರತ ಬಿಲ್ಲವರ ಯೂನಿಯನ್ (ರಿ.), ಕುದ್ರೋಳಿ, ಮಂಗಳೂರು ಇದರ ವತಿಯಿಂದ 2026 ರ ಜನವರಿ 18 ರಂದು ಮಂಗಳೂರಿನ ನೆಹರು ಮೈದಾನದಲ್ಲಿ ನಡೆಯಲಿರುವ ಪ್ರಪ್ರಥಮ ಜಾಗತಿಕ ಬಿಲ್ಲವರ ಕ್ರೀಡೋತ್ಸವ ದ ಲಾಂಛನ (ಲೋಗೋ) ವನ್ನು ಕರುನಾಡ ಚಕ್ರವರ್ತಿ ಡಾ.ಶಿವರಾಜ್ ಕುಮಾರ್ ರವರು ಬೆಂಗಳೂರಿನಲ್ಲಿ ಅನಾವರಣಗೊಳಿಸಿದರು.

ಬಳಿಕ ಮಾತನಾಡಿದ ಅವರು, ಯುವ ಕ್ರೀಡಾ ಪ್ರತಿಭೆಗಳಿಗೆ ಅವಕಾಶ ನೀಡುವ ಜತೆಯಲ್ಲಿ ಸಮಾಜವನ್ನು ಸಂಘಟಿಸುವ ಮಹತ್ಕಾರ್ಯ ಮಾಡುತ್ತಿರುವ ಅಖಿಲ ಭಾರತ ಬಿಲ್ಲವರ ಯೂನಿಯನ್ ನ ಕಾರ್ಯಕ್ರಮ ಗಳು ಶ್ಲಾಘನೀಯ ಎಂದರು.. ಯೂನಿಯನ್ ನ ಅಧ್ಯಕ್ಷರಾದ ನವೀನ್ ಚಂದ್ರ ಸುವರ್ಣ ಶುಭಹಾರೈಸಿದರು.
ಯೂನಿಯನ್ ನ ಉಪಾಧ್ಯಕ್ಷ ರಾದ ಕೆ.ಟಿ.ಸುವರ್ಣ, ಪ್ರಧಾನ ಕಾರ್ಯದರ್ಶಿ ಜೀವನ್ ಕುಮಾರ್ ತೊಕ್ಕೊಟು, ಸಂಘಟನಾ ಕಾರ್ಯದರ್ಶಿ ಗಳಾದ ಉದಯಚಂದ್ರ ಡಿ.ಸುವರ್ಣ, ಎ.ಜೆ.ಶೇಖರ್, ಕ್ರೀಡಾ ಪ್ರಧಾನ ಸಂಚಾಲಕರು ಸದಾನಂದ ಪೂಜಾರಿ, ಪ್ರಮುಖರಾದ ಸತೀಶ್ ಕರ್ಕೇರ, ಸಂದೇಶ್ ಬಂಗೇರ ಮತ್ತಿತರರು ಉಪಸ್ಥಿತರಿದ್ದರು.