ಬೆಂಗಳೂರು, ಜು 01(Daijiworld News/SM): ಶಾಸಕರ ರಾಜೀನಾಮೆ ಹಿಂದೆ ಮಾಜಿ ಸಿಎಂ ಸಿದ್ದರಾಮಯ್ಯರ ಕೈವಾಡವಿದೆ ಇದೆ ಎಂದು ಮಾಜಿ ಸಚಿವ ಸುರೇಶ್ ಕುಮಾರ್ ಆರೋಪಿಸಿದ್ದಾರೆ.
ಆನಂದ್ ಸಿಂಗ್ ಮತ್ತು ರಮೇಶ್ ಜಾರಕಿಹೊಳಿ ರಾಜೀನಾಮೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಆಡಿಸುವಾತನ ಕೈಚಳಕದಲ್ಲಿ ಎಲ್ಲಾ ಅಡಗಿದೆ. ಆ ಆಡಿಸುವಾತ ಯಾರು ಎಂಬುದು ಸದ್ಯಕ್ಕೆ ಉಂಟಾಗಿರುವ ಪ್ರಶ್ನೆಯಾಗಿದೆ. ಆದರೆ, ಯಾರಿಗೆ ಈ ಮೈತ್ರಿ ಸರ್ಕಾರ ಮುಂದುವರೆಸುವ ಮನಸ್ಸಿಲ್ಲವೋ, ಅವರು ಇದನ್ನೆಲ್ಲಾ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.
ಅಸಮಾಧಾನ, ಅತೃಪ್ತಿಯನ್ನು ಹೋಗಲಾಡಿಸಲೆಂದೇ ಮೈತ್ರಿ ಸರಕಾರ ನಡುವೆ ಸಮನ್ವಯ ಸಮಿತಿ ರಚಿಸಲಾಗಿದೆ. ಸಮಸ್ವಯ ಸಮಿಯ ಅಧ್ಯಕ್ಷರು ಪರಿಸ್ಥಿತಿಯನ್ನು ನಿಯಂತ್ರಿಸಬೇಕು. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಹಾಗೆ ಯಾವುದೇ ವಿಚಾರಗಳು ಗೋಚರವಾಗುತ್ತಿಲ್ಲ.
ರಾಜ್ಯದ ಸಮನ್ವಯ ಯಾರ ಕೈಯ್ಯಲ್ಲಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಅತೃಪ್ತಿ ಹೋಗಲಾಡಿಸುವ ಆ ಶಕ್ತಿ ಯಾರಿಗಿದೆ. ಯಾರು ಎಲ್ಲರನ್ನೂ ನಿಯಂತ್ರಿಸಲು ಶಕ್ತರು ಎಂಬುದು ಇಡೀ ರಾಜ್ಯಕ್ಕೆ ಗೊತ್ತಿದೆ ಎಂದು ಶಾಸಕ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಇನ್ನು ರಾಜ್ಯದ ಬರ ಪರಿಸ್ಥಿತಿಯ ಬಗ್ಗೆ ಮೈತ್ರಿ ಸರಕಾರ ಗಮನ ಹರಿಸುತ್ತಿಲ್ಲ. ಈ ಬಗ್ಗೆ ಬಿಜೆಪಿಗೆ ಚಿಂತೆ ಶುರುವಾಗಿದೆ. ಜವಾಬ್ದಾರಿಯುತ ವಿಪಕ್ಷವಾಗಿ ನಾವು ಈ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದೇವೆ ಎಂದರು.