ಹಾವೇರಿ, ಜು 02(Daijiworld News/SM): ಸಣ್ಣಪುಟ್ಟ ಕಳವು ಮಾಡುವವರನ್ನು ಒದ್ದು ಲಾಕರ್ ಗೆ ಹಾಕುವಂತೆ ಸಚಿವ ಜಮೀರ್ ಅಹ್ಮದ್ ಅವರನ್ನು ಪೊಲೀಸರು ಲಾಕಪ್ನಲ್ಲಿ ಇಟ್ಟರೆ ಐಎಂಎ ಲೂಟಿ ಪ್ರಕರಣದ ಸತ್ಯಗಳು ಬಯಲಾಗುತ್ತವೆ ಎಂಬ ಬಿಜೆಪಿ ಶಾಸಕ ಕೆಎಸ್ ಈಶ್ವರಪ್ಪ ಅವರು ಹೇಳಿದ್ದು, ಇದಕ್ಕೆ ಜಮೀರ್ ಅಹಮ್ಮದ್ ಖಾನ್ ತಿರುಗೇಟು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ನಾನು ನನ್ನ ಸ್ವಂತ ಆಸ್ತಿಯನ್ನು ಮಾರಾಟ ಮಾಡಿದ್ದೇನೆ. ಆದರೆ ನಿಮ್ಮ ಹಾಗೆ ಸರಕಾರದ ಖಜಾನೆಯನ್ನು ಲೂಟಿ ಮಾಡಿಲ್ಲ ಎಂದು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ್ದು, ಈಶ್ವರಪ್ಪ ವಿರುದ್ಧ ಹರಿಹಾಯ್ದಿದ್ದಾರೆ.
ಐಎಎಂ ಜ್ಯುವೆಲ್ಲರ್ಸ್ ಮಾಲೀಕ ಮನ್ಸೂರ್ಗೆ ಮಾರಾಟ ಮಾಡಿರುವುದು ನನ್ನ ಸ್ವಂತ ಆಸ್ತಿಯನ್ನು. ನನ್ನ ಜಾಗ ಮಾರಲು ನನಗೆ ಯಾರ ಅನುಮತಿಯ ಅಗತ್ಯ ಕೂಡ ಇಲ್ಲ. ನಿಮ್ಮಂತೆ ನಾನು ಯಾವತ್ತೂ ಕೂಡ ಸರಕಾರ ಆಸ್ತಿಯನ್ನು ಲೂಟಿ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.
ನನ್ನ ಆಸ್ತಿಯನ್ನು 2017ರ ಡಿಸೆಂಬರ್ನಲ್ಲಿ ಮನ್ಸೂರ್ಗೆ ಮಾರಾಟ ಮಾಡಿದ್ದೆ. ಅದಕ್ಕೆ ಆರ್ಟಿಜಿಎಸ್ ಮೂಲಕ 5 ಕೋಟಿ ರೂಪಾಯಿ ಅಡ್ವಾನ್ಸ್ ಪಡೆದುಕೊಂಡಿದ್ದೆ. 2018ರ ಜೂನ್ನಲ್ಲಿ ಬಾಕಿ 4.36 ಪಡೆದು ಆಸ್ತಿ ನೋಂದಣಿ ಮಾಡಿಕೊಟ್ಟಿದ್ದೇನೆ. ಚುನಾವಣೆಯಲ್ಲಿ ಅಫಿಡವಿಟ್ನಲ್ಲಿ ಇವೆಲ್ಲವನ್ನು ವಿವರವಾಗಿ ತಿಳಿಸಿದ್ದೇನೆ. ಅಲ್ಲದೆ ಇವೆಲ್ಲದಕ್ಕೂ ತೆರಿಗೆಯನ್ನು ಪಾವತಿಸಿದ್ದೇನೆ ಎಂದು ಅವರು ತಿಳಿಸಿದ್ದಾರೆ.