ಪಾಟ್ನಾ, ನ. 02 (DaijiworldNews/AA): ಆಪರೇಷನ್ ಸಿಂಧೂರದಿಂದ ಪಾಕಿಸ್ತಾನ ಮತ್ತು ಕಾಂಗ್ರೆಸ್ ಎರಡೂ ಚೇತರಿಸಿಕೊಂಡಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಹಾರ ವಿಧಾನಸಭಾ ಚುನಾವಣಾ ಪ್ರಚಾರದ ಭಾಗವಾಗಿ ಅರಾಹ್ನಲ್ಲಿಂದು ನಡೆದ ರ್ಯಾಲಿಯಲ್ಲಿ ಮಾತನಾಡಿ, "ಗಾಂಧಿ ಕುಟುಂಬವನ್ನು 'ರಾಜಪರಿವಾರ' ಎಂದು ಕರೆದರು. ಅತ್ತ ಪಾಕಿಸ್ತಾನದಲ್ಲಿ ಸ್ಫೋಟಗಳು ಸಂಭವಿಸುತ್ತಿದ್ರೆ ಕಾಂಗ್ರೆಸ್ನ 'ರಾಜಪರಿವಾರ' ಇಲ್ಲಿ ನಿದ್ರೆ ಕಳೆದುಕೊಂಡಿತ್ತು. ಇಲ್ಲಿಯವರೆಗೆ ಪಾಕಿಸ್ತಾನ-ಕಾಂಗ್ರೆಸ್ ಎರಡೂ ಚೇತರಿಸಿಕೊಂಡಿಲ್ಲ" ಎಂದು ತಿಳಿಸಿದರು.
"ಸಂವಿಧಾನದ 370ನೇ ವಿಧಿ ರದ್ದು ಮಾಡ್ತೀವಿ ಅನ್ನೋದು ಮೋದಿಯ ಗ್ಯಾರಂಟಿ. ಅದು ಈಗ ಜಮ್ಮು ಮತ್ತು ಕಾಶ್ಮೀರದಲ್ಲಿ ಅನುಷ್ಠಾನಗೊಂಡಿದ್ದು, ಭಾರತದ ಸಂವಿಧಾನದೊಂದಿಗೆ ನಡೆಯುತ್ತಿದೆ. ಅಲ್ಲದೇ ಉಗ್ರರನ್ನ ತಮ್ಮ ನೆಲದಲ್ಲೇ ಬಗ್ಗು ಬಡಿಯುವುದಾಗಿಯೂ ಪ್ರತಿಜ್ಞೆ ಮಾಡಿದ್ವಿ. ಆಪರೇಷನ್ ಸಿಂಧೂರ ಮೂಲಕ ಆ ಗ್ಯಾರಂಟಿಯನ್ನೂ ಪೂರೈಸಿದೆವು. ಇದು ಇಡೀ ರಾಷ್ಟ್ರವೇ ಹೆಮ್ಮೆಪಡುವಂತೆ ಮಾಡಿತು" ಎಂದು ಹೇಳಿದರು.