ಶ್ರೀಹರಿಕೋಟಾ, ನ. 02 (DaijiworldNews/AA): ಭಾರತದ ಅತ್ಯಂತ ಭಾರದ ಬಾಹುಬಲಿ ರಾಕೆಟ್ ಎಂದೇ ಪ್ರಸಿದ್ಧಿ ಪಡೆದಿರುವ ಜಿಎಸ್ಎಲ್ವಿ ಮಾರ್ಕ್ 3 ಸಿಎಂಎಸ್ 03 (ಜಿಎಸ್ಎಟಿ-7ಆರ್) ಸಂವಹನ ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ.

ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿರುವ ಉಡ್ಡಯನ ಕೇಂದ್ರದಿಂದ ಭಾನುವಾರ ಸಂಜೆ 5:26ಕ್ಕೆ 4,410 ಕೆ.ಜಿ. ತೂಕದ ಉಪಗ್ರಹ ಬಾಹುಬಲಿಯನ್ನು ಹೊತ್ತ 'ಎಲ್ವಿಎಂ-ಎಂ5' ರಾಕೆಟ್ ಮೂಲಕ ಇಸ್ರೋ ಯಶಸ್ವಿಯಾಗಿ ಉಡಾವಣೆ ಮಾಡಿತು.
ಈ ಉಪಗ್ರಹವನ್ನು ಇಸ್ರೋ ಭಾರತೀಯ ನೌಕಾಪಡೆಗಾಗಿ ವಿಶೇಷವಾಗಿ ಅಭಿವೃದ್ಧಿಪಡಿಸಿದ್ದು, ಬಹು-ಬ್ಯಾಂಡ್ ಮಿಲಿಟರಿ ಸಂವಹನ ಉಪಗ್ರಹ ಇದಾಗಿದೆ. ಭಾರತದ ನೆಲದಿಂದ ಜಿಯೋಸಿಂಕ್ರೋನಸ್ ಟ್ರಾನ್ಸ್ಫರ್ ಆರ್ಬಿಟ್ಗೆ ಇಷ್ಟು ತೂಕದ ಉಪಗ್ರಹವನ್ನು ಉಡಾಯಿಸುತ್ತಿರುವುದು ಇದೇ ಮೊದಲ ಬಾರಿಗೆ.
ಮಲ್ಟಿ-ಬ್ಯಾಂಡ್ ಸಂವಹನ ಉಪಗ್ರಹವು ಸಿಎಂಎಸ್ 03 ಭಾರತೀಯ ಮುಖ್ಯ ಭೂಭಾಗ ಸೇರಿದಂತೆ ವಿಶಾಲ ಸಮುದ್ರ ಪ್ರದೇಶಕ್ಕೆ ಸೇವೆಗಳನ್ನು ಒದಗಿಸಲಿದೆ. ಈ ಉಪಗ್ರಹ ಸಿ, ಎಕ್ಸ್ಟೆಂಡೆಡ್ ಸಿ, ಕ್ಯೂ ಬ್ಯಾಂಡ್ಗಳಲ್ಲಿ ವಾಯ್ಸ್, ಡೇಟಾ ಮತ್ತು ವಿಡಿಯೋ ಲಿಂಕ್ಗಳಿಗೆ ಟ್ರಾನ್ಸ್ಪಾಂಡರ್ ಸೌಲಭ್ಯಗಳನ್ನು ಒದಗಿಸುತ್ತದೆ.