ನವದೆಹಲಿ, ಜು03(Daijiworld News/SS): ಕೇಂದ್ರ ಹಾಗೂ ರಾಜ್ಯಗಳ ಆರ್ಥಿಕ ಸಹಭಾಗಿತ್ವದಲ್ಲಿ ರೈತರಿಗೆ ಕಡಿಮೆ ದರದಲ್ಲಿ ಸೋಲಾರ್ ಪಂಪ್ಗಳನ್ನು ವಿತರಿಸುವ ಯೋಜನೆ ಜಾರಿಗೆ ಚಿಂತನೆ ನಡೆಯುತ್ತಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ.
ರೈತರಿಗೆ ಸೌರ ವಿದ್ಯುತ್ ಚಾಲಿತ ಪಂಪ್ಸೆಟ್ಗಳನ್ನು ಉಚಿತವಾಗಿ ನೀಡುವ ಯಾವ ಪ್ರಸ್ತಾವವೂ ಸರಕಾರದ ಮುಂದಿಲ್ಲ. ಆದರೆ, ಕಡಿಮೆ ದರದಲ್ಲಿ ಸೋಲಾರ್ ಪಂಪ್ಗಳನ್ನು ವಿತರಿಸುವ ಯೋಜನೆ ಜಾರಿಗೆ ಚಿಂತನೆ ನಡೆಯುತ್ತಿದೆ ಎಂದು ಕೇಂದ್ರ ಸರಕಾರ ಹೇಳಿದೆ.
ಸೌರ ವಿದ್ಯುತ್ ಚಾಲಿತ ಪಂಪ್ಸೆಟ್ ದರದ ಶೇ.30ರಷ್ಟು ಕೇಂದ್ರವೇ ಭರಿಸುವ ಪ್ರಸ್ತಾವ ನಮ್ಮ ಮುಂದಿದೆ. ರಾಜ್ಯ ಸರಕಾರವೂ ಅಷ್ಟೇ ಪಾಲು ಭರಿಸಿದಲ್ಲಿ ಕಡಿಮೆ ದರದಲ್ಲಿ ರೈತರಿಗೆ ಶಕ್ತಿಶಾಲಿ ಸೋಲಾರ್ ಪಂಪ್ಗಳನ್ನು ವಿತರಿಸಲು ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ರಾಜ್ಯಗಳ ಸಹಕಾರ ನಿರೀಕ್ಷಿಸಲಾಗುತ್ತಿದೆ ಎಂದು ನವೀಕರಿಸಬಹುದಾದ ಇಂಧನ ಖಾತೆಯ ಸಹಾಯಕ ಸಚಿವ ಆರ್.ಕೆ. ಸಿಂಗ್ ತಿಳಿಸಿದ್ದಾರೆ.