ಬೆಂಗಳೂರು, ಜು 03:(Daijiworld News/SM): ರಾಜ್ಯದಲ್ಲಿ ಆಡಳಿತದಲ್ಲಿರುವ ಮೈತ್ರಿ ಸರಕಾರ ಬೀಳುವುದಕ್ಕೆ ಮಾಧ್ಯಮಗಳು ಕಾಯುತ್ತಿವೆ. ಸರಕಾರ ಬೀಳುವುದನ್ನು ನೋಡುವ ಆಸೆ ಮಾಧ್ಯಮಗಳಿಗೆ ಶುರುವಾಗಿದೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ದೇವೇಗೌಡ ಅವರು ಅಸಮಾಧಾನ ಹೊರಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಕಾರವನ್ನು ಬೀಳಿಸುವುದು ಕನಸಿ ಮಾತಾಗಿದ್ದು, ಮುಂದಿನ ನಾಲ್ಕು ವರ್ಷ ಇದು ನನಸಾಗುವುದಿಲ್ಲ ಎಂದಿದ್ದಾರೆ. ನಾನು ಪುರಾವೆ ಇಲ್ಲದೆ ಮಾತನಾಡುವುದಿಲ್ಲ, ಪುರಾವೆ ಇರುವುದರಿಂದಲೇ ಹೇಳುತ್ತಿದ್ದೇನೆ ಸರ್ಕಾರಕ್ಕೆ ಯಾವ ಸಂಕಷ್ಟವೂ ಇಲ್ಲವೆಂದು ಅವರು ಹೇಳಿದರು.
ಮಾಧ್ಯಮಗಳು ಹೇಳುತ್ತಿರುವ ಪ್ರಕಾರ ರಾಜ್ಯದಲ್ಲಿ ಆಡಳಿತದಲ್ಲಿರುವ ಮೈತ್ರಿ ಸರಕಾರಕ್ಕೆ ಯಾವುದೇ ಅಪಾಯ ಇಲ್ಲ ಎಂದು ಅವರು ಹೇಳಿದರು.