ರಾಜಸ್ಥಾನ, ನ. 22 (DaijiworldNews/AK): ರಾಜಸ್ಥಾನದ ಸವಾಯಿ ಮಾಧೋಪುರ್ನ ಸಾಧಾರಣ ಹಳ್ಳಿಯಲ್ಲಿ ಹುಟ್ಟಿ, ಬೆಳೆದು ಶಿಕ್ಷಣ ಪಡೆದುಕೊಂಡು ಆಡಳಿತದ ಕಾರಿಡಾರ್ಗೆ ಬಂದ ಸುಲೋಚನಾ ಮೀನಾ ಅವರ ಯಶಸ್ಸು ಕಥೆ.

22ನೇ ವಯಸ್ಸಿನಲ್ಲಿಯೇ ಅತ್ಯಂತ ಕಠಿಣವಾದ ಮತ್ತು ಅಷ್ಟೇ ಸ್ಪರ್ಧಾತ್ಮಕವಾದ ಪರೀಕ್ಷೆಯಾದ ಯುಪಿಎಸ್ಸಿ ಅನ್ನು ಒಳ್ಳೆಯ ಅಂಕಗಳನ್ನು ಪಡೆದುಕೊಳ್ಳುವ ಮೂಲಕ ಸುಲೋಚನಾ ಮೀನಾ ಪಾಸ್ ಮಾಡಿದರು.
ನಂತರ ಅವರು ಈಗ ಜಾರ್ಖಂಡ್ನ ಪಲಮುವಿನ ಎಸ್ಡಿಒ ಆಗಿ ಸೇವೆ ಸಲ್ಲಿಸುತ್ತಿದ್ದಾರೆ, ಅವರ ಜಿಲ್ಲೆಯ ಅತ್ಯಂತ ಕಿರಿಯ ಐಎಎಸ್ ಅಧಿಕಾರಿ ಮತ್ತು ಅವರ ಹಳ್ಳಿಯಿಂದ ಬಂದ ಮೊದಲ ಐಎಎಸ್ ಅಧಿಕಾರಿ, ಹೊಸ ಪೀಳಿಗೆಗೆ ಧೈರ್ಯದಿಂದ ಕನಸು ಕಾಣಲು ಸ್ಫೂರ್ತಿ ನೀಡಿದ ದಿಟ್ಟ ಮಹಿಳೆಯಾಗಿದ್ದಾರೆ.
ಮೂಲತಃ ರಾಜಸ್ಥಾನದ ಸವಾಯಿ ಮಾಧೋಪುರ್ ಜಿಲ್ಲೆಯ ಅದಲ್ವಾಡಾ ಗ್ರಾಮದವರಾದ ಸುಲೋಚನಾ ಅವರು 2021 ರಲ್ಲಿ ಯುಪಿಎಸ್ಸಿ ಪರೀಕ್ಷೆ ಬರೆದರು. 2022 ರಲ್ಲಿ ಘೋಷಿಸಲಾದ ಫಲಿತಾಂಶಗಳಲ್ಲಿ ಅಖಿಲ ಭಾರತ ಮಟ್ಟದಲ್ಲಿ 415ನೇ ರ್ಯಾಂಕ್ ಗಳಿಸಿ ಮತ್ತು ಎಸ್ಟಿ ವಿಭಾಗದಲ್ಲಿ ಆರನೇ ಸ್ಥಾನವನ್ನು ಪಡೆದರು.
ತನ್ನ ಮೊದಲ ಪ್ರಯತ್ನದಲ್ಲಿಯೇ ಇಷ್ಟು ಚಿಕ್ಕ ವಯಸ್ಸಿನಲ್ಲಿ ಯಶಸ್ವಿಯಾಗುವ ಮೂಲಕ, ಭಾರತದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದನ್ನು ಉತ್ತೀರ್ಣರಾದ ದೇಶದ ಅತ್ಯಂತ ಕಿರಿಯ ಅಭ್ಯರ್ಥಿಗಳ ಪಟ್ಟಿಗೆ ಅವರು ಸೇರಿದ್ದಾರೆ.
ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ, ಅವರು ದೆಹಲಿ ವಿಶ್ವವಿದ್ಯಾಲಯದಲ್ಲಿ ಸಸ್ಯಶಾಸ್ತ್ರದಲ್ಲಿ ಬಿ.ಎಸ್ಸಿ ಪದವಿ ಪಡೆದರು. ಅವರ ಶೈಕ್ಷಣಿಕ ಜೊತೆಗೆ, ಅವರು ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್) ಯಲ್ಲಿ ಸಕ್ರಿಯವಾಗಿ ಭಾಗವಹಿಸಿದರು.
ಅವರು ತಮ್ಮ ಕುಟುಂಬದ ಹಿರಿಯ ಮಗಳು ಮಾತ್ರವಲ್ಲದೆ, ತಮ್ಮ ಹಳ್ಳಿಯಿಂದ ಐಎಎಸ್ ಅಧಿಕಾರಿಯಾದ ಮೊದಲ ಮಹಿಳೆ ಸಹ ಆದರು. ಜಿಲ್ಲೆಯಿಂದ ಆಯ್ಕೆಯಾದ ಅತ್ಯಂತ ಕಿರಿಯ ಮಹಿಳಾ ಅಭ್ಯರ್ಥಿ ಎಂಬ ಹೆಗ್ಗಳಿಕೆಗೂ ಸಹ ಅವರು ಪಾತ್ರರಾದರು.