ಹುಬ್ಬಳ್ಳಿ, ನ. 23 (DaijiworldNews/AA): ಸಿದ್ದರಾಮಯ್ಯ ಅಧಿಕಾರ ಬಿಟ್ಟು ಕೊಡಲ್ಲ, ಕಾಂಗ್ರೆಸ್ ಹೈಕಮಾಂಡ್ ಸೂಚನೆ ಕೊಟ್ಟರೂ ಸಿದ್ದರಾಮಯ್ಯ ರಾಜೀನಾಮೆ ನೀಡಲ್ಲ ಎಂದು ಸಂಸದ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, "ಅವರೇ ಹೈಕಮಾಂಡ್ ಅಲ್ಲ. ಅವರ ಅಸ್ತಿತ್ವ ಸಹ ಇಲ್ಲ. ಹೀಗಾಗಿ, ಸರ್ಕಾರ ಪತನದ ಅಂಚಿನಲ್ಲಿದೆ. ಅಧಿಕಾರದಲ್ಲಿರಿ ಅಂತ ಸಂಗೀತ ನುಡಿಸುತ್ತಿರುತ್ತಾರೆ. ಡಿಕೆ ಮುಖ್ಯಮಂತ್ರಿ ಆಗಬೇಕು ಅನ್ನೋ ಹಠವನ್ನ ಬಿಡೋದಿಲ್ಲ. ಇವರ ಗುದ್ದಾಟಕ್ಕೆ ಸರ್ಕಾರ ಪತನವಾಗುತ್ತೆ" ಎಂದು ತಿಳಿಸಿದರು.
ಕುಮಾರಸ್ವಾಮಿ ಅಧಿಕಾರ ಕಳೆದುಕೊಳ್ಳಲು ಸಿದ್ದರಾಮಯ್ಯ ಕಾರಣ ಎಂಬ ದೇವೇಗೌಡರ ಹೇಳಿಕೆ ಕುರಿತು ಮಾತನಾಡಿದ ಅವರು, "ಸಿದ್ದರಾಮಯ್ಯ ನೇಚರ್ ನನಗೆ ಗೊತ್ತಿದೆ. ಅಧಿಕಾರಕ್ಕಾಗಿ ಇಂತಹ ಚಟುವಟಿಕೆ ಮಾಡುವ ಉದಾಹರಣೆ ಇವೆ. ಕಾಂಗ್ರೆಸ್ಗೆ ಹೊಸಬರಾಗಿ ಬಂದರು ಸಿದ್ದರಾಮಯ್ಯ. ಅವರನ್ನ ಕಾಂಗ್ರೆಸ್ ಮುಖ್ಯಮಂತ್ರಿ ಮಾಡಿದೆ. ದೇವೇಗೌಡರು ಹಿರಿಯ ನಾಯಕರು, ಬಹಳಷ್ಟು ನಾಯಕರನ್ನ ಬೆಳೆಸಿದವರು. ಅವರ ಹೇಳಿಕೆಯಲ್ಲಿ ಸತ್ಯಾಂಶ ಇದೆ" ಎಂದಿದ್ದಾರೆ.