ಮುಂಬೈ, ಜು04(Daijiworld News/SS): ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನು ಬಿಜೆಪಿ-ಆರ್'ಎಸ್ಎಸ್ ಸಿದ್ದಾಂತಕ್ಕೆ ಹೋಲಿಸಿದ ಕಾರಣಕ್ಕೆ ಆರ್ ಎಸ್ ಎಸ್ ಕಾರ್ಯಕರ್ತ ಸಲ್ಲಿಸಿದ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿ ಸಂಸದ ರಾಹುಲ್ ಗಾಂಧಿ ಗುರುವಾರ ಮುಂಬೈನ ಶಿವಡಿ ಕೋರ್ಟ್'ಗೆ ವಿಚಾರಣೆಗೆ ಹಾಜರಾಗಿದ್ದಾರೆ. ಇದೀಗ ರಾಹುಲ್ ಗಾಂಧಿ ವಿರುದ್ಧ ಸಲ್ಲಿಸಲಾಗಿದ್ದ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಮುಂಬೈಯ ನ್ಯಾಯಾಲಯ ಜಾಮೀನು ನೀಡಿದೆ.
ಮುಂಬೈಯ ಶಿವಡಿ ಕೋರ್ಟ್'ಗೆ ವಿಚಾರಣೆಗೆ ಹಾಜರಾದ ರಾಹುಲ್ ಗಾಂಧಿ ಮತ್ತವರ ವಕೀಲರು ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಜರಾದರು. ಚುನಾವಣೆ ಸಂದರ್ಭದಲ್ಲಿ ಆಡಳಿತ ಪಕ್ಷದ ನಾಯಕರನ್ನು ಟೀಕಿಸುವಾಗ ರಾಹುಲ್ ಗಾಂಧಿಯವರು, ಗೌರಿ ಲಂಕೇಶ್ ಹತ್ಯೆಗೆ ಬಿಜೆಪಿ-ಆರ್ ಎಸ್ಎಸ್ ಸಿದ್ದಾಂತಗಳು ಮತ್ತು ಅವುಗಳನ್ನು ಹಿಂಬಾಲಿಸುವವರು ಕಾರಣ ಎಂದು ಹೇಳಿಕೆ ನೀಡಿದ್ದರು. ಆದರೆ ಯಾವೊಬ್ಬ ವ್ಯಕ್ತಿಯ ಮೇಲೆ ನಿರ್ದಿಷ್ಟ ಆರೋಪ ಮಾಡಿರಲಿಲ್ಲ.
ಹೀಗಾಗಿ ನ್ಯಾಯಾಲಯ ಅವರನ್ನು ಆರೋಪ ಮುಕ್ತಗೊಳಿಸಿದ್ದು, ಜಾಮೀನು ನೀಡಿದೆ.
15 ಸಾವಿರ ರೂಪಾಯಿ ಶ್ಯೂರಿಟಿ ಬಾಂಡ್ ನ್ಯಾಯಾಲಯಕ್ಕೆ ಪಾವತಿಸಿ ರಾಹುಲ್ ಗಾಂಧಿಯವರಿಗೆ ನ್ಯಾಯಾಲಯ ಆರೋಪ ಮುಕ್ತಗೊಳಿಸಿದ್ದು ಮಾಜಿ ಸಂಸದ ಏಕನಾಥ್ ಗಾಯಕ್ ವಾಡ್ ರಾಹುಲ್ ಗಾಂಧಿಯವರಿಗೆ ಶ್ಯೂರಿಟಿ ನೀಡಿದರು.