ತಿರುವನಂತಪುರಂ, ನ. 29 (DaijiworldNews/TA): ಶಬರಿಮಲೆ ಸನ್ನಿಧಾನದಲ್ಲಿ ಯಾತ್ರಿಕರು ಮೃತರಾದ ಸಂದರ್ಭಗಳಲ್ಲಿ, ಮೃತದೇಹವನ್ನು ಸ್ಟ್ರೆಚರ್ನಲ್ಲಿ ಹೊತ್ತುಕೊಂಡು ಪಂಬಾಗೆ ತರುವುದನ್ನು ನಿಲ್ಲಿಸಿ, ಕಡ್ಡಾಯವಾಗಿ ಆಂಬುಲೆನ್ಸ್ನಲ್ಲಿ ತರಬೇಕೆಂದು ಕೇರಳ ಹೈಕೋರ್ಟ್ ಆದೇಶಿಸಿದೆ. ಹೈಕೋರ್ಟ್ ಹೇಳಿದಂತೆ, ಮೃತದೇಹವನ್ನು ಹೊತ್ತುಕೊಂಡು ಬೆಟ್ಟ ಏರುವ ದೃಶ್ಯವು ಉಳಿದ ಭಕ್ತರ ಮನೋವೇದನೆ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು.

ಈವರೆಗೆ ಶಬರಿಮಲೆ ಯಾತ್ರೆಯಲ್ಲಿ 8 ದಿನಗಳಲ್ಲಿ 8 ಭಕ್ತರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಪ್ರತಿವರ್ಷ ಈ ಸೀಸನ್ನಲ್ಲಿ 150ಕ್ಕೂ ಹೆಚ್ಚು ಭಕ್ತರು ಹೃದಯ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಾರೆ. ಇದರಲ್ಲಿ ಸುಮಾರು 40-42 ಭಕ್ತರು ಆಸ್ಪತ್ರೆಯಲ್ಲೇ ಸಾವನ್ನಪ್ಪುತ್ತಾರೆ.
ಹಾಗೂ ಹೈಕೋರ್ಟ್ ದೇವಸ್ವಂ ಬೋರ್ಡ್ಗೆ ಸೂಚಿಸಿದ ಪ್ರಕಾರವಾಗಿ ಶಬರಿಮಲೆ ಸೇರುವ ಯಾತ್ರಿಕರಿಗೆ ದಾರಿ ಮಧ್ಯೆ ವಿಶ್ರಾಂತಿ ಪಡೆಯಲು ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ತಿಳಿಸಲಾಗಿದೆ.