ನವದೆಹಲಿ, ಜೂ 05 (Daijiworld News/MSP): ಲೋಕಸಭೆಯಲ್ಲಿ 2019-20ನೇ ಸಾಲಿನ ವಿತ್ತೀಯ ಬಜೆಟ್ ಮಂಡನೆ ಪ್ರಕ್ರಿಯೆಯನ್ನು ಸಚಿವೆ ನಿರ್ಮಲಾ ಸೀತಾರಾಮನ್ ಆರಂಭಿಸಿದ್ದಾರೆ. ಮೊದಲ ಬಾರಿಗೆ ಬಜೆಟ್ ಭಾಷಣ ಮಾಡುತ್ತಿರುವ ನಿರ್ಮಲಾ ಸೀತಾರಾಮನ್ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಗಳಿಸಲಾದ ಅಭೂತಪೂರ್ವ ವಿಜಯವನ್ನು ಮೊದಲಿಗೆ ಪ್ರಸ್ತಾವಿಸಿದರು.
ಪುತ್ರಿ ನಿರ್ಮಲಾ ಸೀತಾರಾಮನ್ ದೇಶದ ಬಜೆಟ್ ನ್ನು ಮಂಡಿಸುವುದನ್ನು ನೋಡಲೆಂದು ನಿರ್ಮಲಾ ಸೀತಾರಾಮನ್ ಅವರ ಪೋಷಕರಾದ ಸಾವಿತ್ರಿ ಮತ್ತು ನಾರಾಯಣನ್ ಸೀತಾರಾಮನ್ ಆಗಮಿಸಿ ಸಂಸತ್ತಿನ ಗ್ಯಾಲರಿಯಲ್ಲಿ ಅಸೀನರಾಗಿದ್ದಾರೆ.
ಬಜೆಟ್ ಪ್ರತಿಯನ್ನು ಕೆಂಪುವಸ್ತ್ರದಲ್ಲಿ ಸುತ್ತಿರುವ ಬಜೆಟ್ ಪ್ರತಿಯೊಂದಿಗೆ ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ ಭವನ ಪ್ರವೇಶಿಸಿದ್ದಾರೆ. ಈ ಮೂಲಕ ಸೂಟ್ ಕೇಸ್ ಸಂಸ್ಕೃತಿ ನಮ್ಮದಲ್ಲ ಎನ್ನುವ ಸಂದೇಶ ಸಾರಿದ್ದಾರೆ. ಬಜೆಟ್ ಪ್ರತಿಗಳು ಕೂಡ ಬಿಗಿ ಭದ್ರತೆಯಲ್ಲಿ ಸಂಸತ್ ಭವನಕ್ಕೆ ತರಲಾಯಿತು.
ಇದಕ್ಕೂ ಮುನ್ನ ಸಂಪ್ರದಾಯದಂತೆ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್, ರಾಷ್ಟ್ರಪತಿ ಭವನಕ್ಕೆ ಭೇಟಿ ನೀಡಿ ಬಜೆಟ್ ಪ್ರತಿಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ಗೆ ಸಲ್ಲಿಸಿದರು.