ನವದೆಹಲಿ, ಡಿ. 01 (DaijiworldNews/ AK):ಸಂಸತ್ತಿನ ಚಳಿಗಾಲದ ಅಧಿವೇಶನದ ಮೊದಲ ದಿನವಾದ ಇಂದು ಕಾಂಗ್ರೆಸ್ ಸಂಸದೆ ರೇಣುಕಾ ಚೌಧರಿ ತಮ್ಮ ಸಾಕು ನಾಯಿಯೊಂದಿಗೆ ಸಂಸತ್ ಭವನಕ್ಕೆ ಆಗಮಿಸಿರುವುದು ವಿವಾದಕ್ಕೆ ಕಾರಣವಾಯಿತು.

ಬೆಳಗ್ಗೆ ಸಂಸತ್ ಭವನದ ವಿಸಿಟರ್ಸ್ ಗ್ಯಾಲರಿ ಬಳಿಗೆ ಅವರು ಕಾರಿನಲ್ಲಿ ಸಾಕು ನಾಯಿಯೊಂದಿಗೆ ಆಗಮಿಸಿದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿತು. ಸರ್ಕಾರ ನೀಡಿದ ಸಂಸದ ವಿಶೇಷ ಸವಲತ್ತುಗಳನ್ನ ದುರ್ಬಳಕೆ ಮಾಡಿಕೊಂಡು ಹೀಗೆ ವರ್ತಿಸಬಾರದು ಎಂದು ಬಿಜೆಪಿ ಟೀಕಿಸಿತು.
ಇದಕ್ಕೆ ಪ್ರತಿಕ್ರಿಯೆ ನೀಡಿದ ರೇಣುಕಾ ಚೌಧರಿ, ಸರ್ಕಾರ ಜೀವಿಗಳನ್ನು ಒಳಗೆ ಇರಿಸಲು ಇಷ್ಟಪಡುವುದಿಲ್ಲ. ಆದರೆ ಇದು ಚಿಕ್ಕ ಪ್ರಾಣಿ, ಯಾರನ್ನೂ ಕಚ್ಚುವುದಿಲ್ಲ. ಸಂಸತ್ತಿನೊಳಗಿನವರಂತೆ ಅಲ್ಲ, ಕಚ್ಚುವವರು ಒಳಗೆ ಕುಳಿತಿದ್ದಾರೆ ಅಂತ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ್ದರು.
ಸಾಕು ಪ್ರಾಣಿಗಳನ್ನು ಒಳಗೆ ತರಲು ಪಾಸ್ ಮಾಡಿ ಬಿಲ್ ಮಂಡಿಸಿ ಎಂದರು. ಮುಂದುವರಿದು, ನಾನು ನಾಯಿಯನ್ನು ಸ್ವಲ್ಪ ಸಮಯಕ್ಕೆ ಮಾತ್ರ ತಂದಿದ್ದೆ ಅದನ್ನು ವಾಪಸ್ ಕಳಿಹಿಸಿದ್ದೇನೆ ಎಂದರು.