ಶಿವಮೊಗ್ಗ, ಡಿ. 02 (DaijiworldNews/AA): ಕೆಎಸ್ಆರ್ಟಿಸಿ ಬಸ್ಸಿನ ಚಕ್ರಕ್ಕೆ ಸಿಲುಕಿ ನಾಡಬಾಂಬ್ ಸ್ಫೋಟಗೊಂಡ ಪರಿಣಾಮ ಚಾಲಕ ನಿಯಂತ್ರಣ ಕಳೆದುಕೊಂಡು ಟ್ರಾನ್ಸ್ಫಾರ್ಮರ್ಗೆ ಡಿಕ್ಕಿ ಹೊಡೆದ ಘಟನೆ ಶಿಕಾರಿಪುರ ತಾಲೂಕಿನ ಹಿರೇಕಲವತ್ತಿ ಗ್ರಾಮದಲ್ಲಿ ನಡೆದಿದೆ.

ಬಸ್ ಮುಡಬ ಸಿದ್ದಾಪುರದಿಂದ ಶಿಕಾರಿಪುರಕ್ಕೆ ತೆರಳುತ್ತಿತ್ತು. ಈ ವೇಳೆ ಬಸ್ ಹಿರೇಕಲವತ್ತಿ ಗ್ರಾಮದ ಬಳಿ ಬರುತ್ತಿದ್ದಾಗ ಚಕ್ರಕ್ಕೆ ನಾಡಬಾಂಬ್ ಸಿಲುಕಿ ಸ್ಫೋಟಗೊಂಡಿದೆ. ಜೋರಾದ ಸ್ಫೋಟದ ಶಬ್ದದಿಂದ ಚಾಲಕ ನಿಯಂತ್ರಣ ಕಳೆದುಕೊಂಡಿದ್ದು, ಪಕ್ಕದಲ್ಲಿದ್ದ ಟ್ರಾನ್ಸ್ಫಾರ್ಮರ್ಗೆ ಬಸ್ ಡಿಕ್ಕಿ ಹೊಡೆದಿದೆ.
ಬಸ್ಸಿನ ಟೈಯರ್ ರಿಮ್ಗೆ ನಾಡಬಾಂಬ್ ತಗುಲಿ ಸ್ಫೋಟಗೊಂಡಿದ್ದರಿಂದ ಭಾರೀ ದುರಂತ ತಪ್ಪಿದೆ. ಸ್ಫೋಟಕ್ಕೂ 5 ನಿಮಿಷಗಳ ಮುನ್ನ ಹಿಂದಿನ ನಿಲ್ದಾಣದಲ್ಲಿ 45 ವಿದ್ಯಾರ್ಥಿಗಳು ಬಸ್ನಿಂದ ಇಳಿದಿದ್ದರು. ಇದರಿಂದ ದೊಡ್ಡ ಅನಾಹುತವೊಂದು ತಪ್ಪಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.