ನವದೆಹಲಿ, ಜೂ 05 (Daijiworld News/MSP): ಕೇಂದ್ರ ಸರ್ಕಾರದ 2019-20ನೇ ಸಾಲಿನ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶುಕ್ರವಾರ ಲೋಕಸಭೆಯಲ್ಲಿ ಮಂಡಿಸಿದ್ದು ಯಾವುದು ದುಬಾರಿ, ಯಾವುದೇ ಅಗ್ಗ ಎನ್ನುವ ಸಂಕ್ಷಿಪ್ತ ಮಾಹಿತಿ ಇಲ್ಲಿ ನೀಡಲಾಗಿದೆ.
ಯಾವುದು ಅಗ್ಗ
* ಪಾಮ್ ಆಯಿಲ್, ಪ್ಯಾಟಿ ಆಯಿಲ್, ಪೇಪರ್ಸ್, ಕೋಬಾಲ್ಟ್, ಇಥಲಿನ್ ಅಗ್ಗವಾಗಿದೆ
* ಇನ್ನು ಡಯಾಲಿಸಿಸ್ ಯಂತ್ರ ಮತ್ತು ಪರಿಕರಗಳ ಬೆಲೆಗಳು ಇಳಿಕೆಯಾಗಿವೆ.
* ಕೃತಕ ಕಿಡ್ನಿ, ಶಸ್ತ್ರ ಚಿಕಿತ್ಸೆ ಉಪಕರಣಗಳು , ಚರ್ಮೋತ್ಪನ್ನ ಅಗ್ಗವಾಗಲಿದೆ.
* ಎಲೆಕ್ಟ್ರಿಕ್ ವಾಹನ ಖರೀದಿ ಮಾಡುವವರಿಗೆ ಹಣಕಾಸು ನೆರವು ಹಾಗೂ ತೆರಿಗೆ ವಿನಾಯಿತಿ
ಯಾವುದು ದುಬಾರಿ
* ಪೆಟ್ರೋಲ್ ಮತ್ತು ಡೀಸೆಲ್ ಮೇಲೆ 1 ರೂ. ಸೆಸ್ ಏರಿಕೆ
* ಬಂಗಾರದ ಮೇಲಿನ ಆಮದು ಸುಂಕವನ್ನು ಶೇ.10ರಿಂದ 12.5ಕ್ಕೆ ಏರಿಸಲಾಗಿದೆ. ಹೀಗಾಗಿ ಬಜೆಟ್ ಅಧಿಕೃತವಾಗಿ ಜಾರಿಯಾದ ಬಳಿಕ ಚಿನ್ನದ ದರ ಏರಿಕೆಯಾಗಲಿದೆ
* ಪಿವಿಸಿ ಪೈಪ್, ಸಿಸಿ ಕ್ಯಾಮರಾ, ಡಿವಿಡಿ, ಐಪಿ ಕ್ಯಾಮರಾಗಳು ದುಬಾರಿಯಾಗಿದೆ
* ಟೈಲ್ಸ್, ಮಾರ್ಬಲ್ , ಆಟೋ ಬಿಡಿಭಾಗಗಳು, ವಿನೈಲ್ ಫ್ಲೋರ್ಸ್ ಏರಿಕೆ ಕಂಡಿದೆ.
* ತಂಬಾಕು ಉತ್ಪನ್ನ, ರಬ್ಬರ್ ದುಬಾರಿಯಾಗಿದೆ.