ಮಡಿಕೇರಿ, ಜು 05 (Daijiworld News/SM): ಮಡಿಕೇರಿಯ ಕಾಟಿಕೇರಿ ಎಂಬಲ್ಲಿ ಹೆದ್ದಾರಿಯು ಮತ್ತೆ ಬಿರುಕು ಬಿಟ್ಟಿದ್ದು ವಾಹನ ಸವಾರರಲ್ಲಿ ಭೀತಿ ಉಂಟಾಗಿದೆ. ಸದ್ಯ ಹೆದ್ದಾರಿಯಲ್ಲಿ ಘನ ವಾಹನ ಸಂಚಾರ ನಿಷೇಧಿಸಲಾಗಿದೆ.
ಘನವಾಹನಗಳಿಗೆ ಪರ್ಯಾಯ ಮೂರ್ಗದ ಮೂಲಕ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಕುಶಾಲನಗರದ ಮೂಲಕ ಸಕಲೇಶ್ ಪುರ ಮೂಲಕ ಘನವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಇನ್ನು ಕಳೆದ ವರ್ಷದ ಮಳೆದ ಸಂದರ್ಭದಲ್ಲಿ ಕುಸಿತಗೊಂಡಿದ್ದ ಈ ಪ್ರದೇಶದಲ್ಲಿ ಸಿಮೆಂಟ್ ಗೋಣಿ ಚೀಲಗಳನ್ನಿಟ್ಟು ತಾತ್ಕಾಲಿಕ ತಡೆಗೋಡೆ ನಿರ್ಮಿಸಲಾಗಿತ್ತು. ಇದೀಗ ಆ ರಸ್ತೆಯಲ್ಲಿ ಮತ್ತೆ ಬಿರುಕು ಸಂಭವಿಸಿದ್ದು ಸಾರ್ವಜನಿಕರಲ್ಲಿ ಆತಂಕ ಮೂಡಿದೆ.
ಇನ್ನು ಮಡಿಕೇರಿಯ ಕೆಲವೆಡೆ ಕಳೆದ ವರ್ಷ ಸಂಭವಿಸಿದ ಭೀಕರ ಜಲಪ್ರಳಯದ ಸಂದರ್ಭ ಅಲ್ಲಲ್ಲಿ ಹೆದ್ದಾರಿ ಕುಸಿತ ಸಂಭವಿಸಿತ್ತು. ತಿಂಗಳುಗಳ ಕಾಲ ರಸ್ತೆ ಸಂಚಾರವನ್ನು ನಿಷೇಧಿಸಲಾಗಿತ್ತು. ಬಳಿಕ ರಸ್ತೆ ದುರಸ್ಥಿಗೊಳಿಸಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು.