ಬೆಂಗಳೂರು, ಜು06(Daijiworld News/SS): ಹೋಗುವವರನ್ನ ಹಿಡಿದುಕೊಳ್ಳಲು ಆಗಲ್ಲ. ಸಮಸ್ಯೆ ಇರಬಹುದು. ಆದರೆ ಎಲ್ಲಾ ಸೆಟಲ್ ಆಗುತ್ತೆ. ರಾಜೀನಾಮೆಗೆ ಬೇಕಾದಷ್ಟು ಪ್ರೋಸಸ್ ಇದೆ. ನೋಡೋಣ ಎಂದು ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಪ್ರಾಮಾಣಿಕವಾಗಿ ನನ್ನ ಪ್ರಯತ್ನ ಮಾಡಿದ್ದೇನೆ. ಬಿಜೆಪಿಯವರು ಏನೂ ಗೊತ್ತಿಲ್ಲ ಅನ್ನೋಥರ ಇದ್ದಾರೆ. ಯಾವ ಬಿಲ್ಡರ್ಗೆ ಕಾಲ್ ಮಾಡಿ ಎಷ್ಟೆಷ್ಟು ಹಣ ವಸೂಲಿ ಮಾಡ್ತಿದ್ದಾರೆ ಅನ್ನೋದು ಗೊತ್ತಿದೆ. ಕಾದು ನೋಡಿ ಎಂದು ಹೇಳಿದರು.
ಸರ್ಕಾರ ಉಳಿಸಿಕೊಳ್ಳಲು ನಾವು ಸಿದ್ದರಿದ್ದೇವೆ. ಅಗತ್ಯ ಬಿದ್ದಲ್ಲಿ ಕೆಲವರು ಸಚಿವ ಸ್ಥಾನವನ್ನೂ ತ್ಯಾಗ ಮಾಡುತ್ತಾರೆ. ಶಾಸಕರು, ಸಚಿವರ ಜೊತೆ ಸಭೆ ನಡೆಸುತ್ತೇವೆ. ಬಿಜೆಪಿಯ ಕೆಲವರು ಸರ್ಕಾರ ಉರುಳಿಸಲು ಪ್ರಯತ್ನ ನಡೆಸುತ್ತಲೇ ಇದ್ದಾರೆ. ಆದರೆ ಅದಕ್ಕೆ ಅವಕಾಶ ನೀಡುವುದಿಲ್ಲ. ನಮ್ಮ ಸರ್ಕಾರ ಸುಭದ್ರವಾಗಿ ಇರಲಿದೆ. ಯಾವುದೇ ಅತೃಪ್ತಿ ಇದ್ದರು ಸರಿ ಮಾಡುತ್ತೇವೆ ಎಂದು ಹೇಳಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ತಲ್ಲಣ ಶುರುವಾಗಿದೆ. 10ಕ್ಕೂ ಹೆಚ್ಚು ಶಾಸಕರು ರಾಜೀನಾಮೆ ಕೊಟ್ಟಿದ್ದು, ಈ ಮೂಲಕ ಅಮೇರಿಕದಿಂದ ಬರುವ ಮೊದಲೇ ಸಿಎಂಗೆ ಶಾಕ್ ನೀಡಿದ್ದಾರೆ.