ಬೆಂಗಳೂರು, ಜು06(Daijiworld News/SS): ಸಮ್ಮಿಶ್ರ ಸರಕಾರದ ಕಾಂಗ್ರೆಸ್ ಹಾಗೂ ಜೆಡಿಎಸ್ನ ಹಲವು ಶಾಸಕರು ರಾಜೀನಾಮೆ ನೀಡಿರುವ ಬಗ್ಗೆ ಮಾಜಿ ಸಿಎಂ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಬಹಳ ಜನ ಶಾಸಕರು ರಾಜೀನಾಮೆ ಕೊಟ್ಟಿರುವುದು ಗೊತ್ತಾಗಿದೆ. ಇದರಲ್ಲಿ ನಮ್ಮ ಪಾತ್ರ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಹಳ ಜನ ಶಾಸಕರು ರಾಜೀನಾಮೆ ಕೊಟ್ಟಿರುವುದು ಗೊತ್ತಾಗಿದೆ. ಇದರಲ್ಲಿ ನಮ್ಮ ಪಾತ್ರ ಇಲ್ಲ. ಮುಂದೇನು ಬೆಳವಣಿಗೆ ಆಗುತ್ತೆ ಅಂತ ಕಾದು ನೋಡೋಣ. ಇವತ್ತು ಯಾರು ರಾಜೀನಾಮೆ ಕೊಟ್ಟಿದ್ದಾರೋ, ಮುಂದೆ ಅವರೇನು ನಿಲುವು ತೆಗೆದುಕೊಳ್ಳುತ್ತಾರೋ ಅದರ ಆಧಾರದ ಮೇಲೆ ರಾಜಕೀಯ ಭವಿಷ್ಯ ನಿಂತಿದೆ. ಅದಕ್ಕೆ ನಾನು ಇಷ್ಟು ಬೇಗ ಪ್ರತಿಕ್ರಿಯೆ ಕೊಡೋದಿಲ್ಲ ಎಂದು ಹೇಳಿದ್ದಾರೆ.
ಅನಿರೀಕ್ಷಿತವಾಗಿ ಶಾಸಕರು ರಾಜಿನಾಮೆ ಕೊಡ್ತಿದ್ದಾರೆ. ಇದೆಲ್ಲವನ್ನು ನಾನೂ ಕೂಡ ಗಮನಿಸುತ್ತಾ ಇದ್ದೇನೆ. ಮುಂದೇನು ಅವರು ನಿಲುವು ತೆಗೆದುಕೊಳ್ಳುತ್ತಾರೊ ಕಾದು ನೋಡೊಣ. ಸಮ್ಮಿಶ್ರ ಸರಕಾರದ ಮೇಲೆ ಜನರು ಕೂಡ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ ಎಂದು ದೂರಿದರು.
ರಾಜ್ಯ ರಾಜಕೀಯದಲ್ಲಾದ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಒಂದೇ ದಿನ 10ಕ್ಕೂ ಹೆಚ್ಚು ಮಂದಿ ಅತೃಪ್ತ ಶಾಸಕರು ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್ ಶಾಸಕರ ಜೊತೆಗೆ ಜೆಡಿಎಸ್ ಶಾಸಕರು ಕೂಡ ರಿಸೈನ್ ಮಾಡಿರೋದು ಅಚ್ಚರಿ ಮೂಡಿಸಿದೆ.