ನವದೆಹಲಿ, ಜು08(Daijiworld News/SS): ಕರ್ನಾಟಕದಲ್ಲಿ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟಿಗೂ, ಬಿಜೆಪಿಗೂ ಸಂಬಂಧವಿಲ್ಲ ಎಂದು ಕೇಂದ್ರ ಸಚಿವ ರಾಜನಾಥ್ ಸಿಂಗ್ ಇಂದು ಸಂಸತ್ತಿನಲ್ಲಿ ಹೇಳಿದ್ದಾರೆ.
ಕರ್ನಾಟಕದಲ್ಲಿ ಏನು ನಡೆಯುತ್ತಿದೆಯೋ ಅದಕ್ಕೂ ನಮ್ಮ ಪಕ್ಷಕ್ಕೂ ಸಂಬಂಧವಿಲ್ಲ. ನಮ್ಮ ಪಕ್ಷ ಎಂದಿಗೂ ಕುದುರೆ ವ್ಯಾಪಾರದಲ್ಲಿ ತೊಡಗಿಲ್ಲ. ಸಂಸದೀಯ ಪ್ರಜಾಪ್ರಭುತ್ವದ ಘನತೆಯನ್ನು ಕಾಪಾಡಿಕೊಳ್ಳಲು ನಾವು ಬದ್ಧರಾಗಿದ್ದೇವೆ ಎಂದು ಹೇಳಿದರು.
ಯಾವುದೇ ಪಕ್ಷದ ಶಾಸಕರ ಮೇಲೆ ನಮ್ಮ ಪಕ್ಷವು ಒತ್ತಡ ಹೇರಿಲ್ಲ. ಈ ರಾಜೀನಾಮೆ ನಾಟಕ ಪ್ರಾರಂಭಿಸಿದ್ದೇ ರಾಹುಲ್ ಗಾಂಧಿ. ರಾಜೀನಾಮೆ ಸಲ್ಲಿಸುವ ಪ್ರವೃತ್ತಿಯನ್ನು ಕಾಂಗ್ರೆಸ್ನಲ್ಲಿ ರಾಹುಲ್ ಗಾಂಧಿ ಪ್ರಾರಂಭಿಸಿದರು, ಅದನ್ನು ನಾವು ಪ್ರಾರಂಭಿಸಿಲ್ಲ. ರಾಜೀನಾಮೆ ಸಲ್ಲಿಸುವಂತೆ ಅವರು ಸ್ವತಃ ತಮ್ಮ ಪಕ್ಷದವರನ್ನೇ ಕೇಳಿದ್ದಾರೆ. ಅದರಂತೆ ಕಾಂಗ್ರೆಸ್ ನ ಹಿರಿಯ ನಾಯಕರೂ ರಾಜೀನಾಮೆ ಸಲ್ಲಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಕರ್ನಾಟಕದಲ್ಲಿ ರಾಜಕೀಯದ ಕ್ಷಿಪ್ರ ಬೆಳವಣಿಗೆಗಳು ನಡೆಯುತ್ತಿದ್ದು ದೋಸ್ತಿ ಸರ್ಕಾರದ ಇಪ್ಪತ್ತೊಂದು ಸಚಿವರೂ ರಾಜೀನಾಮೆ ನಿಡಿದ್ದಾರೆ.