ಬೆಂಗಳೂರು, ಡಿ. 09 (DaijiworldNews/ TA): ಚುಕುಬುಕು ಶಬ್ದ ಕಿವಿಗೆ ಬಡಿದಾಗ ರೈಲಿನ ಓಡಾಟ ಖಾತರಿಯಾಗುತ್ತದೆ. ಅತಿ ದೊಡ್ಡ ಸಾರಿಗೆ ವ್ಯವಸ್ಥೆ ಕಣ್ಣಿಗೆ ಸುಂದರವಾಗಿ ಕಾಣಿಸುತ್ತೆ. ಪ್ರಯಾಣವೂ ಅಷ್ಟೇ ಸೊಗಸಾಗಿರುತ್ತದೆ. ಆದರೆ ಈ ಉಗಿಬಂಡಿಯ ವಿನ್ಯಾಸದಲ್ಲಿ ಬಣ್ಣದಲ್ಲೂ ಒಂದು ವಿಶೇಷತೆ ಇದೆ. ಅದು ಏನು ಅಂತ ತಿಳಿಯಬೇಕಂದ್ರೆ ಈ ಲೇಖನ ಪೂರ್ತಿ ಓದಲೇ ಬೇಕು.

ವಿಶ್ವದ ನಾಲ್ಕನೇ ಅತಿದೊಡ್ಡ ಸಾರಿಗೆ ವ್ಯವಸ್ಥೆಯಾದ ಭಾರತೀಯ ರೈಲ್ವೆ ಪ್ರತಿದಿನ ಲಕ್ಷಾಂತರ ಪ್ರಯಾಣಿಕರನ್ನು ಹೊತ್ತು ಸಾಗುತ್ತದೆ. ಪ್ರಯಾಣಿಕರ ಅನುಕೂಲಕ್ಕಾಗಿ ಅನೇಕ ಸೌಲಭ್ಯಗಳನ್ನು ಒದಗಿಸುವ ರೈಲ್ವೆ, ಓದಲು ಬಾರದೇ ಇರುವವರಿಗೂ ಸುಲಭವಾಗಿ ತಿಳಿಯುವಂತೆ ಹಲವು ದೃಶ್ಯಾತ್ಮಕ ಸಂಕೇತಗಳನ್ನು ಬಳಸುತ್ತದೆ. ಆದರೆ ನಾವು ರೈಲು ನಿಲ್ದಾಣದಲ್ಲಿ ಕಾಣುವ ಹಲವು ಗುರುತುಗಳು, ವಿಶೇಷವಾಗಿ ಬೋಗಿಗಳ ಮೇಲಿರುವ ಬಣ್ಣದ ರೇಖೆಗಳು ಅವುಗಳಿಗೆ ಇರುವ ಅರ್ಥವನ್ನು ಬಹುತೇಕ ಗಮನಿಸುವುದಿಲ್ಲ. ಆ ಆಳದ ಅರ್ಥವೂ ವಿಶೇಷವಾಗಿದೆ.
ರೈಲು ಬೋಗಿಗಳ ಮೇಲೆ ಕಾಣುವ ಬಿಳಿ, ಹಳದಿ, ಹಸಿರು, ಕೆಂಪು, ಬೂದು ಮತ್ತು ನೀಲಿಯಂತಹ ರೇಖೆಗಳು ಸಾಮಾನ್ಯವಾಗಿ ಕೇವಲ ಅಲಂಕಾರವಲ್ಲ, ಪ್ರತಿಯೊಂದು ಬಣ್ಣಕ್ಕೂ ರೈಲ್ವೆ ನಿರ್ಧರಿಸಿರುವ ಸ್ವಂತ ಮಹತ್ವ ಹಾಗೂ ನಿರ್ದಿಷ್ಟ ಅರ್ಥವಿದೆ.
ಬೋಗಿಗಳ ಮೇಲಿನ ಬಣ್ಣದ ರೇಖೆಗಳ ಅರ್ಥ:
ಬಿಳಿ ರೇಖೆ: ಇದು ಸಾಮಾನ್ಯ ಕೋಚ್ ಅನ್ನು ಸೂಚಿಸುತ್ತದೆ. ಈ ಕೋಚ್ಗಳಲ್ಲಿ ಯಾವುದೇ ಮೀಸಲಾತಿ ಇರೋದಿಲ್ಲ.
ಹಳದಿ ರೇಖೆ: ಒಂದು ಬೋಗಿಯ ಮೇಲೆ ಹಳದಿ ರೇಖೆ ಕಂಡರೆ, ಅದು ಅಂಗವಿಕಲ ಪ್ರಯಾಣಿಕರಿಗೆ ಮೀಸಲ್ಪಟ್ಟ ಕೋಚ್ ಎಂದು ಅರ್ಥ.
ಹಸಿರು ರೇಖೆ: ಹಸಿರು ಬಣ್ಣದ ಹೈಲೈಟ್ ಇರುವ ಕೋಚ್ಗಳು ಮಹಿಳೆಯರಿಗೆ ವಿಶೇಷವಾಗಿ ಮೀಸಲಾದ ಬೋಗಿಗಳು.
ಕೆಂಪು ರೇಖೆ: ಇವು ಮುಖ್ಯವಾಗಿ ಪ್ರೀಮಿಯಂ ರೈಲುಗಳಲ್ಲಿ ಬಳಸಲಾಗುತ್ತವೆ. ಕೆಂಪು ಗುರುತು ಇರುವ ಬೋಗಿ ಸಾಮಾನ್ಯವಾಗಿ ಪ್ರೀಮಿಯಂ ಪ್ರಥಮ ದರ್ಜೆ ಎಸಿ ಕೋಚ್ ಅನ್ನು ಸೂಚಿಸುತ್ತದೆ.
ಬೂದು / ತಿಳಿ ನೀಲಿ ಬಣ್ಣ: ಇತ್ತೀಚಿನ ದಿನಗಳಲ್ಲಿ, ಶತಾಬ್ದಿ ಮತ್ತು ಆಧುನಿಕ ರೈಲುಗಳಂತಹ ಐಸಿಎಫ್ ಕೋಚ್ಗಳಿಗೆ ಹೊಸ ನೋಟ ನೀಡಲು ಬೂದು ಮತ್ತು ತಿಳಿ ನೀಲಿ ಬಣ್ಣಗಳನ್ನು ಬಳಸಲಾಗುತ್ತಿದೆ.
ಬಣ್ಣಗಳ ಜೊತೆಗೆ ಇತರ ಗುರುತುಗಳೂ ಮಹತ್ವದವು: ಬಣ್ಣದ ರೇಖೆಗಳೊಂದಿಗೆ, ರೈಲು ಬೋಗಿಗಳ ಮೇಲೆ ಇರುವ H1, A1, B1 ಮುಂತಾದ ಗುರುತುಗಳು ಕೂಡ ಕೋಚ್ನ ವರ್ಗವನ್ನು ಸೂಚಿಸುತ್ತವೆ.
H1 — ಫಸ್ಟ್ ಕ್ಲಾಸ್ ಎಸಿ
A1 — AC ಟೂ ಟಿಯರ್
B1 — AC ತ್ರೀ ಟಿಯರ್ಈ
ಎಲ್ಲಾ ವ್ಯವಸ್ಥೆಗಳು ಪ್ರಯಾಣಿಕರಿಗೆ ತಮ್ಮ ಕೋಚ್ ಅನ್ನು ಸುಲಭವಾಗಿ ಗುರುತಿಸಲು ಹಾಗೂ ಮಾಹಿತಿ ವ್ಯವಸ್ಥೆಯನ್ನು ಸುಗಮಗೊಳಿಸಲು ಭಾರತೀಯ ರೈಲ್ವೆಯು ರೂಪಿಸಿದವುಗಳಾಗಿವೆ.