ಬೆಂಗಳೂರು, ಡಿ. 09 (DaijiworldNews/ TA): ಬೆಂಗಳೂರಿನಿಂದ ವಡೋದರಾ ಕಡೆ ಹೋಗುತ್ತಿದ್ದ ಇಂಡಿಗೋ ವಿಮಾನದಲ್ಲಿ ಹಾರಾಡುತ್ತಿದ್ದ ಪಾರಿವಾಳವು ಪ್ರಯಾಣಿಕರಿಗೆ ಅಚ್ಚರಿಯ ಕ್ಷಣಗಳನ್ನು ಉಂಟುಮಾಡಿದ್ದು, ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ವೈರಲ್ ವೀಡಿಯೊದಲ್ಲಿ, ಪ್ರಯಾಣಿಕರು ಮತ್ತು ಸಿಬ್ಬಂದಿ ಹಾರಾಟದ ವೇಳೆ ಪಾರಿವಾಳವನ್ನು ಹಿಡಿಯಲು ಯತ್ನಿಸುತ್ತಿರುವುದು ಕಾಣುತ್ತದೆ. ಆದರೆ ಅದು ಅವರಿಂದ ತಪ್ಪಿಸಿಕೊಂಡು ವಿಮಾನದ ಒಳಗೆ ಹಾರುತ್ತಲೇ ಮುಂದುವರಿಯುತ್ತಿತ್ತು. ಸಾಮಾಜಿಕ ಮಾಧ್ಯಮ ಬಳಕೆದಾರರು ಈ ದೃಶ್ಯವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. “ವಿಮಾನದಲ್ಲಿ ಅಚ್ಚರಿಯ ಉಡುಗೊರೆಯನ್ನು ಪಡೆದೆ, ಪ್ರಯಾಣವು ಸಂತೋಷದಿಂದ ಮತ್ತು ನಗುವಿನ ವಾತಾವರಣದಲ್ಲಿ ಮುಗಿಯಿತು,” ಎಂದು ಪೋಸ್ಟ್ನಲ್ಲಿ ಹೇಳಲಾಗಿದೆ.
ಇನ್ಸ್ಟಾಗ್ರಾಮ್ ಬಳಕೆದಾರ ಕರ್ಣ ಪರೇಖ್ ಈ ವೀಡಿಯೊವನ್ನು ಎರಡು ದಿನಗಳ ಹಿಂದೆ ಪೋಸ್ಟ್ ಮಾಡಿದ್ದಾರೆ. ವಿಡಿಯೋದಲ್ಲಿ ಪಾರಿವಾಳವು ವಿಮಾನದ ಕ್ಯಾಬಿನ್ ಒಳಗೆ ಹಾರಾಡುತ್ತಿರುವುದು ಸ್ಪಷ್ಟವಾಗುತ್ತದೆ. ಪ್ರಯಾಣಿಕರು ಮತ್ತು ಸಿಬ್ಬಂದಿ ಅದನ್ನು ಹಿಡಿಯಲು ಯತ್ನಿಸುತ್ತಿದ್ದಾರೆ. ಪಾರಿವಾಳವು ಯಾರಿಂದಲೂ ತಪ್ಪಿಸಿಕೊಂಡು ಹಾರುತ್ತಿರುವಂತೆ ತೋರುತ್ತಿತ್ತು.
ಈ ವೈರಲ್ ವಿಡಿಯೋ ಎಲ್ಲಾ ಪ್ರಯಾಣಿಕರಿಗೆ, ವಿಮಾನ ಪ್ರಯಾಣವನ್ನು ಸ್ಮರಣೀಯವಾಗಿಸಿದೆ. ಇಂಡಿಗೋ ಏರ್ಲೈನ್ಸ್ ಇತ್ತೀಚಿನ ದಿನಗಳಲ್ಲಿ ಸಮಸ್ಯೆಗಳ ಕಾರಣದಿಂದ ಸುದ್ದಿಯಲ್ಲಿದೆ. ಕೆಲವು ದಿನಗಳಿಂದ ವಿಮಾನಗಳು ರದ್ದು ಆಗುತ್ತಿರುವುದರಿಂದ ಪ್ರಯಾಣಿಕರು ನಿರಾಶೆಗೊಳ್ಳುತ್ತಿದ್ದಾರೆ.