ನವದೆಹಲಿ, ಡಿ. 09 (DaijiworldNews/ AK): ಇದೀಗ ರೈಲ್ವೆ ಲೋಕೋ ಪೈಲಟ್ಗಳ ಬೇಡಿಕೆಯೊಂದು ಮುಂದಿಟ್ಟಿದ್ದಾರೆ. ತಮ್ಮ ಕರ್ತವ್ಯ ಸಮಯ ಮಿತಿಗೊಳಿಸಲು ಹಾಗೂ ವಾರದ ರಜೆಗೆ ಒತ್ತಾಯಿಸಿದ್ದಾರೆ.

ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋದಲ್ಲಿನ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ವಿಮಾನಯಾನ ಪೈಲಟ್ಗಳಿಗೆ ಕೆಲಸದ ಸಮಯದ ಮಿತಿಯನ್ನು ನಿಗದಿಪಡಿಸುವ ಸರ್ಕಾರದ ಆದೇಶದ ಬಗ್ಗೆ ಹೇಳುತ್ತಾ, ಭಾರತೀಯ ರೈಲ್ವೆಯ ಲೋಕೋ ಪೈಲಟ್ಗಳ ಆಯಾಸವನ್ನು ತಡೆಗಟ್ಟಲು ಮತ್ತು ರೈಲ್ವೆ ಅಪಘಾತಗಳನ್ನು ತಪ್ಪಿಸಲು ಕೆಲಸದ ಸಮಯದ ಮಿತಿಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ರೈಲ್ವೆಯಲ್ಲಿ ಲೋಕೋ ಪೈಲಟ್ ಹುದ್ದೆಗಳನ್ನು ಭರ್ತಿ ಮಾಡುವಲ್ಲಿನ ವಿಳಂಬದ ವಿರುದ್ಧ ಹೋರಾಟ ನಡೆಸುತ್ತಿರುವ ಲೋಕೋ ಪೈಲಟ್ಗಳು, ಕರ್ತವ್ಯ ಸಮಯ ಮತ್ತು ವೈಜ್ಞಾನಿಕ ರೋಸ್ಟರ್ ಯೋಜನೆ ಸೇರಿದಂತೆ ಉತ್ತಮ ಕಾರ್ಮಿಕ ಸುಧಾರಣೆಗಳ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.
ಅಖಿಲ ಭಾರತ ಲೋಕೋ ರನ್ನಿಂಗ್ ಸ್ಟಾಫ್ ಅಸೋಸಿಯೇಷನ್ ಹೇಳಿಕೆ ಬಿಡುಗಡೆ ಮಾಡಿದ್ದು, ಕೇಂದ್ರವು ಖಾಸಗಿ ವಿಮಾನಯಾನ ಸಂಸ್ಥೆಗಳ ಕಡೆಗೆ ಮೃದುತ್ವವನ್ನು ತೋರಿಸುತ್ತಿದೆ ಮತ್ತು ಸರ್ಕಾರಿ ನೌಕರರೊಂದಿಗೆ ಕಠಿಣ ವಿಧಾನವನ್ನು ತೆಗೆದುಕೊಳ್ಳುತ್ತಿದೆ ಎಂದು ಟೀಕಿಸಿದೆ. ಆದರೆ ದೊಡ್ಡ ಖಾಸಗಿ ಸಂಸ್ಥೆಗಳು ಸುರಕ್ಷತಾ ನಿಯಮಗಳನ್ನು ವಿರೋಧಿಸಿದಾಗ, ಸರ್ಕಾರವು ಅವರ ಆದೇಶಗಳ ಮುಂದೆ ಮಂಡಿಯೂರಿ, ವ್ಯವಸ್ಥೆಯ ಸುರಕ್ಷತೆಯಲ್ಲೂ ರಾಜಿ ಮಾಡಿಕೊಳ್ಳುತ್ತದೆ ಎಂದು ಹೇಳಿದೆ.