ಪಣಜಿ, ಡಿ. 09 (DaijiworldNews/AA): ಗೋವಾ ನೈಟ್ಕ್ಲಬ್ ಅಗ್ನಿ ದುರಂತದಲ್ಲಿ 25 ಮಂದಿ ಸಾವನ್ನಪ್ಪಿದ ಪ್ರಕರಣಕ್ಕೆ ಡಿ. 09 (DaijiworldNews/AA): ಬಿರ್ಚ್ ಬೈ ರೋಮಿಯೋ ಲೇನ್ ನೈಟ್ಕ್ಲಬ್ ಮಾಲೀಕರಾದ ಸೌರವ್ ಲುಥ್ರಾ ಮತ್ತು ಗೌರವ್ ಲುಥ್ರಾ ವಿರುದ್ಧ ಇಂಟರ್ಪೋಲ್ ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಿದೆ. ಜೊತೆಗೆ ಲುಥ್ರಾ ಸಹೋದರರ ನೈಟ್ಕ್ಲಬ್ ನೆಲಸಮಗೊಳಿಸಲು ಸರ್ಕಾರ ಆದೇಶ ಹೊರಡಿಸಿದೆ.

ಡಿಸೆಂಬರ್ 7ರ ಬೆಳಿಗ್ಗೆ ಲುಥ್ರಾ ಸಹೋದರರು ದೇಶವನ್ನು ತೊರೆದು ಫುಕೆಟ್ಗೆ ವಿಮಾನದಲ್ಲಿ ಪರಾರಿಯಾಗಿದ್ದರು. ಪೊಲೀಸರ ಮಾಹಿತಿಯ ಪ್ರಕಾರ, ಉತ್ತರ ಗೋವಾದ ಅರ್ಪೋರಾ ಗ್ರಾಮದಲ್ಲಿರುವ ಬಿರ್ಚ್ ಬೈ ರೋಮಿಯೋ ಲೇನ್ ನೈಟ್ಕ್ಲಬ್ನ ಮಾಲೀಕರು ಡಿಸೆಂಬರ್ 7ರಂದು ಬೆಳಿಗ್ಗೆ 5.30ಕ್ಕೆ ಇಂಡಿಗೋ ಏರ್ಲೈನ್ಸ್ ವಿಮಾನದಲ್ಲಿ ಫುಕೆಟ್ಗೆ ಪರಾರಿಯಾಗಿದ್ದರು.
ಪೊಲೀಸರು ನೈಟ್ಕ್ಲಬ್ನ ಮಾಲೀಕರ ವಿರುದ್ಧ ಲುಕ್ಔಟ್ ನೋಟಿಸ್ ಅನ್ನು ಕೂಡ ಹೊರಡಿಸಿದ್ದಾರೆ. ದೆಹಲಿಯಲ್ಲಿರುವ ಅವರ ನಿವಾಸಕ್ಕೆ ಈ ನೋಟಿಸ್ ಕಳುಹಿಸಲಾಗಿತ್ತು. ಆದರೆ ಮನೆಗೆ ಬೀಗ ಹಾಕಲಾಗಿತ್ತು. ಈ ಮಧ್ಯೆ ಗೋವಾ ಪೊಲೀಸರು ಲುಥ್ರಾ ಸಹೋದರರು ಮತ್ತು ಅವರ ಸಹಚರರನ್ನು ಪತ್ತೆಹಚ್ಚಲು ದೆಹಲಿಯಲ್ಲಿ ದಾಳಿಗಳನ್ನು ತೀವ್ರಗೊಳಿಸಿದ್ದಾರೆ.
ರಾಜ್ಯದ ಲುಥ್ರಾ ಸಹೋದರರ ಮುಖ್ಯ ಕ್ಲಬ್ ಆದ ರೋಮಿಯೋ ಲೇನ್ ವಾಗೇಟರ್ ಅನ್ನು ನೆಲಸಮಗೊಳಿಸುವಂತೆ ಗೋವಾ ಸಿಎಂ ಪ್ರಮೋದ್ ಸಾವಂತ್ ಆದೇಶ ನೀಡಿದ್ದಾರೆ. ಸುರಕ್ಷತಾ ಉಲ್ಲಂಘನೆಗಳು ಮತ್ತು ಕ್ಲಬ್ ಅಗ್ನಿಶಾಮಕ ನಿಯಮಗಳನ್ನು ಪಾಲಿಸಲು ವಿಫಲವಾಗಿದೆ ಎಂಬ ಆರೋಪದ ಮೇಲೆ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಈ ಆದೇಶ ಹೊರಡಿಸಲಾಗಿದೆ.