ಬೆಂಗಳೂರು, ಜು 10 (Daijiworld News/MSP): ಸಮ್ಮಿಶ್ರ ಸರ್ಕಾರದ ಕಾರ್ಯವೈಖರಿ ಬಗ್ಗೆ ಅಸಮಾಧಾನಗೊಂಡು ಅತೃಪ್ತ ಶಾಸಕರು ನೀಡಿರುವ ಕ್ರಮ ಬದ್ದ ರಾಜೀನಾಮೆಯನ್ನು ಒಪ್ಪಿಕೊಳ್ಳದೆ ತತ್ ಕ್ಷಣವೇ ಒಪ್ಪಿಕೊಳ್ಳುವುದನ್ನು ಬಿಟ್ಟು ವಿಳಂಬ ಧೋರಣೆ ಅನುಸರಿಸುತ್ತಿರುವುದು ಸರಿಯಲ್ಲ ಎಂದು ಸ್ಪೀಕರ್ ವಿಳಂಬ ಧೋರಣೆ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅವರು ಡಾಲರ್ಸ್ ಕಾಲೋನಿಯಲ್ಲಿರುವ ತಮ್ಮ ನಿವಾಸದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ಅತೃಪ್ತ ಶಾಸಕರು ಕಾನೂನು ಬದ್ದವಾಗಿರುವ ನೀಡಿರುವ ರಾಜೀನಾಮೆಯನ್ನು ತಕ್ಷಣ ಅಂಗೀಕರಿಸಬೇಕು . ಆದರೆ ಯಾಕೋ ವಿಧಾನಸಭಾಧ್ಯಕ್ಷರು ವಿಳಂಬ ಧೋರಣೆ ತಾಳುತ್ತಿದ್ದಾರೆ. ಸರ್ವಾನುಮತದಿಂದ ಆಯ್ಕೆಗೊಂಡ ಸ್ಪೀಕರ್ ರಮೇಶ್ ಕುಮಾರ್ ಯಾಕೆ ಈ ರೀತಿ ವರ್ತಿಸುತ್ತಿದ್ದಾರೋ ತಿಳಿದಿಲ್ಲ ಎಂದರು.
೮ ಶಾಸಕರ ರಾಜೀನಾಮೆ ಕ್ರಮಬದ್ದವಾಗಿಲ್ಲ ಎಂದು ಸ್ಪೀಕರ್ ಹೇಳಿದ್ದಾರೆ. ರಾಜೀನಾಮೆ ಸರಿಯಾಗಿಲ್ಲ ಎಂದರೆ ಅವರೆಲ್ಲ ಮತ್ತೊಮ್ಮೆ ಬಂದು ರಾಜೀನಾಮೆ ನೀಡಬಹುದು. ಆದರೆ ಈಗಾಗಲೇ ಸ್ಪೀಕರ್ ಅವರೇ ತಿಳಿಸಿರುವಂತೆ ಕ್ರಮಬದ್ದವಾಗಿ ಇರುವ ರಾಜೀನಾಮೆ ಅಂಗೀಕಾರಕ್ಕೆ ಏನು ಸಮಸ್ಯೆ ಎಂದು ಸ್ಪೀಕರ್ ರಮೇಶ್ ಕುಮಾರ್ ಅವರ ನಿಧಾನಗತಿಯ ನಡೆಯನ್ನು ಯಡಿಯೂರಪ್ಪ ಟೀಕಿಸಿದರು.