ಮುಂಬೈ,ಜು 10 (Daijiworld News/MSP): ರಾಜ್ಯ ರಾಜಕಾರಣದ ಹೈಡ್ರಾಮ ಯಾಕೋ ದಿನದಿಂದ ದಿನಕ್ಕೆ ಒಂದೊಂದೆ ತಿರುವು ಪಡೆಯುತ್ತಿದ್ದು, ಅತೃಪ್ತರ ಮನವೊಲಿಕೆಗೆ ಮುಂಬೈಗೆ ಬಂದಿದ್ದ ಶಿವಕುಮಾರ್ ಅವರನ್ನು ಹೋಟೆಲ್ ಒಳಗೆ ಬಿಡಲು ಅಲ್ಲಿನ ಪೊಲೀಸರು ನಿರಾಕರಿಸಿದ್ದಾರೆ. ಈ ಬೆಳವಣಿಗೆಗಳ ನಡುವೆ ರಿನೈಸಾನ್ಸ್ ಹೋಟೆಲ್ನಲ್ಲಿದ್ದ ತಂಗಿದ್ದ ಅತೃಪ್ತ ಶಾಸಕರು ಹಿಂಬಾಗಿಲ ಮೂಲಕ ಬೇರೆಡೆ ಶಿಫ್ಟ್ ಆಗಿದ್ದಾರೆ ಎಂದು ತಿಳಿದುಬಂದಿದೆ.
ಅವರು ಈ ಹಿಂದೆ ವಾಸ್ತವ್ಯ ಹೂಡಿದ್ದ ಸೋಫಿಟೆಲ್ ಹೋಟೆಲ್ ಅಥವಾ ತಾಜ್ ಹೋಟೆಲ್ಗೆ ಸ್ಥಳಾಂತರವಾಗಿರಬಹುದು ಎಂದು ವರದಿಯಾಗಿದೆ. ಡಿಕೆ ಶಿವಕುಮಾರ್ ಹಾಗೂ ಉಳಿದ ಕಾಂಗ್ರೆಸ್ ನಾಯಕರು ಮನವೊಲಿಕೆ ಮುಂಬೈ ಗೆ ಬರುವ ನಿರೀಕ್ಷೆ ಇದ್ದ ಬೆನ್ನಲ್ಲೇ ಅತೃಪ್ತ ಶಾಸಕರು ಮುಂಬೈ ಕಮಿಷನರ್ಗೆ ಭದ್ರತೆ ನೀಡುವಂತೆ ಕೋರಿ ಪತ್ರ ಬರೆದು ಚಾಣಕ್ಯ ನೀತಿ ಅನುಸರಿಸಿದ್ದರು.
ಇನ್ನು ಭೇಟಿಗೆ ತೆರಳಿದ ಡಿಕೆ ಶಿವಕುಮಾರ್ ಅವರನ್ನು ಅಲ್ಲಿನ ಪೊಲೀಸರು ತಡೆದು ಯಾರ ಹೆಸರಿನಲ್ಲಿ ರೂಂ ಬುಕ್ ಮಾಡಿದ್ರೆ ಅವರಿಗೆ ಮಾತ್ರ ಒಳಪ್ರವೇಶಿಸಲು ಅನುಮತಿ ನೀಡುವುದಾಗಿ ತಿಳಿಸಿದ್ದಾರೆ. ಆದರೆ ರಾಜಕೀಯ ಲೆಕ್ಕಚಾರ ಹಾಕಿ ರಿನೈಸಾನ್ಸ್ ಹೋಟೆಲ್ನಲ್ಲಿ ಡಿ ಕೆ ಶಿವಕುಮಾರ್ ಡಿಲಕ್ಸ್ ಲೇಕ್ ವೀವ್ ರೂಮ್ ಬುಕ್ ರೂಂ ಬುಕ್ ಮಾಡಿದ್ದರೂ ಕೂಡಾ ತುರ್ತುಸ್ಥಿತಿ ಕಾರಣ ನೀಡಿ ಹೋಟೆಲ್ ಬುಕ್ಕಿಂಗ್ ಕ್ಯಾನ್ಸಲ್ ಮಾಡಿದೆ ಎಂದು ತಿಳಿದುಬಂದಿದೆ.