ಮಡಿಕೇರಿ, ಡಿ. 15 (DaijiworldNews/TA): ವಿರಾಜಪೇಟೆ ಮೌಲ್ಯತಿರುವ ಮಾಕುಟ್ಟ ಬಳಿ, ಮಗಡಿಪಾರೆ ಆಂಜನೇಯ ದೇವಾಲಯದ ಹತ್ತಿರ ಪ್ರವಾಸಿ ಬಸ್ಸೊಂದು ನಡು ರಸ್ತೆಯಲ್ಲೇ ಹೊತ್ತಿ ಉರಿದ ಘಟನೆ ನಡೆದಿದೆ.

ಕೇರಳ ನೋಂದಣಿಯ ಖಾಸಗಿ ಬಸ್ ಆಗಿದ್ದು, ಮೈಸೂರಿನಿಂದ ಪ್ರವಾಸಿಗರನ್ನು ಇಳಿಸಿದ ನಂತರ ವಾಪಸ್ ತೆರಳುವ ವೇಳೆ ಈ ಅವಘಡ ಸಂಭವಿಸಿದೆ. ಬಸ್ನಲ್ಲಿ ಚಾಲಕ ಮತ್ತು ನಿರ್ವಾಹಕ ಇಬ್ಬರೇ ಇದ್ದರು. ಈ ಅವಘಡದಲ್ಲಿ ಯಾವುದೇ ಪ್ರಾಣಹಾನಿ ನಡೆದಿಲ್ಲ. ಪ್ರವಾಸಿಗರು ಬಸ್ನಲ್ಲಿ ಇದ್ದಿದ್ದರೆ, ಹೆಚ್ಚಿನ ಅನಾಹುತ ಸಂಭವಿಸುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ತಕ್ಷಣ ತೆರಳಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಸ್ ಹೊತ್ತಿ ಉರಿದ ಪರಿಣಾಮ, ಕೊಡಗು-ಕೇರಳ ಮಾರ್ಗದ ಕೆಲವು ಭಾಗಗಳಲ್ಲಿ ಸಂಚಾರಕ್ಕೆ ತಾತ್ಕಾಲಿಕ ಅಡಚಣೆ ಉಂಟಾಗಿತ್ತು.