ನವದೆಹಲಿ, ಡಿ. 15 (DaijiworldNews/AK): ದೆಹಲಿಯಲ್ಲಿನ ದಟ್ಟ ಮಂಜು , ಹೆಚ್ಚಿದ ಮಾಲಿನ್ಯ ಜನಸಾಮಾನ್ಯರು ಹಾಗೂ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಆದ್ದರಿಂದ ದೆಹಲಿಯ ಎಲ್ಲಾ ಶಾಲೆಗಳಲ್ಲೂ ನರ್ಸರಿಯಿಂದ 5ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ( ಕಡ್ಡಾಯ ಆನ್ಲೈನ್ ತರಗತಿಗೆ ಸರ್ಕಾರ ಸೂಚಿಸಿದೆ.

ವಾಯು ಗುಣಮಟ್ಟ ಕುಸಿಯುತ್ತಿದ್ದರಿಂದ ದೆಹಲಿ ಸರ್ಕಾರ ಪೋಷಕರಿಗೆ ಈವರೆಗೆ 2 ಆಯ್ಕೆಗಳನ್ನ ನೀಡಿತ್ತು. ತಮ್ಮ ಮಕ್ಕಳನ್ನು ಶಾಲೆಗೆ ಕಳಿಸುವುದು ಅಥವಾ ಆನ್ಲೈನ್ ತರಗತಿಗಳನ್ನ ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಿತ್ತು. ಆದ್ರೆ ಇಂದು ವಾಯುಗುಣಮಟ್ಟ ಸೂಚ್ಯಂಕ (AQI) 500ಕ್ಕೆ ತಲುಪಿದ ಹಿನ್ನೆಲೆ ಆಯ್ಕೆಗಳನ್ನ ಹಿಂಪಡೆದಿದೆ. ನರ್ಸರಿಯಿಂದ 5ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಎಲ್ಲಾ ಶಾಲೆಗಳಲ್ಲೂ ಕಡ್ಡಾಯ ಆನ್ಲೈನ್ ಕ್ಲಾಸ್ ನಡೆಸಲು ಆದೇಶಿಸಿದೆ.
ಸರ್ಕಾರದ ಆದೇಶದನ್ವಯ ಶಿಕ್ಷಣ ಇಲಾಖೆ ಇಂದು ಸಂಜೆಯೇ ಸುತ್ತೋಲೆ ಹೊರಡಿಸಿದೆ. ವಾಯುಗುಣಮಟ್ಟ ಗಮನದಲ್ಲಿಟ್ಟಿಕೊಂಡು ದೆಹಲಿ ಎಲ್ಲಾ ಸರ್ಕಾರಿ, ಸರ್ಕಾರಿ ಅನುದಾನಿತ, ಅನುದಾನರಹಿತ, ಖಾಸಗಿ ಶಾಲೆಗಳು 5ನೇ ತರಗತಿವರೆಗೆ ಆನ್ಲೈನ್ ಕ್ಲಾಸ್ ಕಡ್ಡಾಯಗೊಳಿಸುವಂತೆ ಸೂಚಿಸಿದೆ. ಮುಂದಿನ ಆದೇಶದ ವರೆಗೆ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳನ್ನ ಸ್ಥಗಿತಗೊಳಿಸಿರುವುದಾಗಿ ತಿಳಿಸಿದೆ.