ಬೆಳಗಾವಿ, ಡಿ. 16 (DaijiworldNews/AA): 'ಹೈಕಮಾಂಡ್ ಹೇಳೋವರೆಗೂ ನಾನೇ ಮುಖ್ಯಮಂತ್ರಿ. ಈಗಲೂ ನಾನೇ, ಮುಂದೆಯೂ ನಾನೇ ಸಿಎಂ' ಎಂದು ಬಿಜೆಪಿಗೆ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ಸಿಎಂ ಬದಲಾವಣೆ, ಐದು ವರ್ಷ ಅಧಿಕಾರ ಬಗ್ಗೆ ಸದನದಲ್ಲಿ ಸ್ವಾರಸ್ಯಕರ ಚರ್ಚೆ ನಡೆದಿದೆ. ನೀವೇ ಐದು ವರ್ಷ ಸಿಎಂ ಆಗೀರ್ತೀರಾ ಸರ್ ಎಂಬ ವಿಪಕ್ಷ ನಾಯಕ ಆರ್ ಅಶೋಕ್ ಪ್ರಶ್ನೆಗೆ ಉತ್ತರಿಸಿದ ಸಿಎಂ, "ಅದನ್ನ ನೀನ್ಯಾಕೆ ಕೇಳ್ತೀಯಾ? ನಮ್ಮಲ್ಲಿ ಹೈಕಮಾಂಡ್ ಇದೆ, ಹೈಕಮಾಂಡ್ ಏನು ತೀರ್ಮಾನ ಮಾಡ್ತಾರೋ ಅದರಂತೆ ಕೇಳ್ತೇವೆ. ಐದು ವರ್ಷ ಇರಿ ಅಂತ ಜನ ನಮಗೆ ಆಶೀರ್ವಾದ ಮಾಡಿದ್ದಾರೆ, ನಾವೇ ಐದು ವರ್ಷ ಇರ್ತೇವೆ. ಬಿಜೆಪಿವರಿಗೆ ಜನ ಆಶೀರ್ವಾದ ಮಾಡಲ್ಲ, ಇವರು ವಿಪಕ್ಷ ಸ್ಥಾನದಲ್ಲಿ ಶಾಶ್ವತವಾಗಿ ಇರ್ತಾರೆ" ಎಂದು ಟಾಂಗ್ ಕೊಟ್ಟಿದ್ದಾರೆ.
"140 ಶಾಸಕರು ನಮ್ ಜತೆ ಇದ್ದಾರೆ, ಜನ ಐದು ವರ್ಷಕ್ಕೆ ಆಶೀರ್ವಾದ ಮಾಡಿದ್ದಾರೆ. 2028 ಕ್ಕೂ ನಾವೇ ಬರ್ತೇವೆ. ಬಿಜೆಪಿಯನ್ನು ಜನ ಯಾವತ್ತೂ ಅಧಿಕಾರಕ್ಕೆ ತರಲ್ಲ. ಜನರ ಆಶೀರ್ವಾದ ಪಡ್ಕೊಂಡು ಬಂದಿದ್ದೀರಾ ನೀವು? ಆಪರೇಷನ್ ಕಮಲ ಮಾಡಿ ಹಿಂಬಾಗಿಲ ಮೂಲಕ ಬಂದಿದ್ದೀರ, ಜನ ನಿಮಗೆ ಆಶೀರ್ವಾದ ಮಾಡಲ್ಲ. 2018 ರಲ್ಲಿ ಜನ ನಿಮಗೂ ಆಶೀರ್ವಾದ ಮಾಡಿರ್ಲಿಲ್ಲ. ಜೆಡಿಎಸ್ ಜತೆ ಸೇರಿ ಸರ್ಕಾರ ಮಾಡಿದ್ರಲ್ಲ, ಅವರ ಮನೆ ಬಾಗಿಲಿಗೆ ಹೋಗಿದ್ರಲ್ಲ ಅಂತ ಅಶೋಕ್ ತಿರುಗೇಟು ಕೊಟ್ಟರು. ನಾವು ಅವರ ಮನೆ ಬಾಗಿಲಿಗೆ ಹೋಗಿರಲಿಲ್ಲ. ಬಿಜೆಪಿ ಬರಬಾರದು ಅಂತ ಅವರೇ ಬಂದಿದ್ರು, ನೀವ್ಯಾಕೆ ಅವರ ಜತೆ ಹೋಗಿದ್ದೀರಿ" ಎಂದು ಸಿಎಂ ಮರುಪ್ರಶ್ನಿಸಿದರು.
ನಾವು ಎದುರು ಮನೆಯವ್ರು ಸರ್, ಕೇಳ್ತೀವಿ, ನೀವು ಐದು ವರ್ಷ ಇರೋದು ಗ್ಯಾರಂಟಿನಾ ಸರ್ ಎಂದು ಅಶೋಕ್ ಮತ್ತೆ ಪ್ರಶ್ನಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಪರಮೇಶ್ವರ್, "ಜನ ಐದು ವರ್ಷ ಆಡಳಿತ ಮಾಡಿ ಅಂತ ಆಶೀರ್ವಾದ ಮಾಡಿದ್ದಾರೆ. ಐದು ವರ್ಷ ನಾವು ಇರ್ತೀವಿ ಅಂದಮೇಲೆ ನಿಮಗೇಕೆ ಅನುಮಾನ ಎಂದು ಹೇಳಿದರು. ಪರಮೇಶ್ವರ್ ಅವರೊಬ್ಬರೇ ಸರ್, ನಾನು ನೋಡಿದ ಹಾಗೆ ಅವರು ಯಾವಾಗಲೂ ನಿಮ್ಮ ಜತೆ ನಿಂತಿದ್ದಾರೆ ಸರ್, ಏನಾದರೂ ಅವಕಾಶ ಆದರೆ ಬ್ಲ್ಯಾಕ್ ಹಾರಿಸ್ತಾರೆ" ಎಂದು ವಾಗ್ದಾಳಿ ನಡೆಸಿದರು.