ಬೆಂಗಳೂರು, ಜು 10 (DaijiworldNews/SM): ರಾಜ್ಯ ರಾಜಕೀಯದಲ್ಲಿ ಹೈಡ್ರಾಮ ನಡೆಯುತ್ತಿದೆ. ಪ್ರಸ್ತುತ ಅಧಿಕಾರದಲ್ಲಿರುವ ದೋಸ್ತಿ ಸರಕಾರ ಅವನತಿಯ ಅಂಚಿನಲ್ಲಿದೆ. ಈ ನಡುವೆ ವಿಧಾನಸೌಧದಲ್ಲಿ ಹೈಡ್ರಾಮ ನಡೆದಿದೆ.
ಜನನಾಯಕರು ಪರಸ್ಪರ ಎಳೆದಾಡಿಕೊಂಡಿದ್ದು, ವಿಧಾನಸೌಧದ ಪಾವಿತ್ರ್ಯತೆಗೆ ಧಕ್ಕೆಯನ್ನುಂಟು ಮಾಡಿದ್ದಾರೆ. ಶಾಸಕ ಸ್ಥಾನಕ್ಕೆ ಸುಧಾಕರ್ ರಾಜೀನಾಮೆ ನೀಡುತ್ತಿದ್ದಂತೆ ವಿಧಾನಸೌಧದಲ್ಲಿ ಹೈಡ್ರಾಮಾವೇ ನಡೆದು ಹೋಗಿದೆ. ಸುಧಾಕರ್ ಅವರನ್ನು ಕಾಂಗ್ರೆಸ್ ಮುಖಂಡರು ಎಳೆದಾಡಿದ್ದು, ಬಳಿಕ ಸಚಿವ ಕೆ.ಜೆ. ಜಾರ್ಜ್ ಅವರ ಕೊಠಡಿಯಲ್ಲಿಸಿದ್ದಾರೆ.
ಈ ನಡುವೆ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದ ನಾಯಕರ ಜತೆ ವಾಗ್ವಾದ ನಡೆದಿದೆ. ಬಳಿಕ ಪ್ರತಿಪಕ್ಷದ ಮುಖಂಡರು ಸಚಿವ ಜಾರ್ಜ್ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಹಾಗೂ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಇನ್ನು ವಿಧಾನಸೌಧದತ್ತ ಆಗಮಿಸುತ್ತಿದ್ದ ಸಚಿವ ಖಾದರ್ ಅವರು ಅಲ್ಲೇ ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿಗನ್ನು ಪ್ರಶ್ನಿಸಿದ್ದಾರೆ. ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸುತ್ತಿದ್ದಿ. ನಾಚಿಕೆಯಾಗಲ್ಲವೇ ನಿಮಗೆ. ರಾಜ್ಯದ ಜನತೆ ರಾಜಕಾರಣಿಗಳ ನಡೆಯನ್ನು ಗಮನಿಸುತ್ತಿದ್ದಾರೆ ಎಂದು ಹೇಳಿದರು. ಈ ವೇಳೆ ಗರಂ ಆದ ರೇಣುಕಾಚಾರ್ಯ, ‘ವಾಪಸ್ ಹೋಗೋ ಬಹಳ ಸತ್ಯವಂತಾ’ ಎಂದು ಸಚಿವ ಯು.ಟಿ. ಖಾದರ್ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಎರಡು ಪಕ್ಷದ ಮುಖಂಡರೂ ಏಕವಚನದಲ್ಲಿ ನಿಂಧಿಸಲಾರಂಭಿಸಿದ್ದಾರೆ.
ಇನ್ನು ಇಷ್ಟೆಲ್ಲ ಘಟನೆಗಳು ನಡೆಯುತ್ತಿದ್ದಂತೆ ವಿಧಾನಸೌಧಕ್ಕೆ ಪೊಲೀಸ್ ಕಮಿಷನರ್ ಭೇಟಿ ನೀಡಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.