ನವದೆಹಲಿ, ,ಡಿ. 24 (DaijiworldNews/AK): ದೆಹಲಿಯ ಗಾಳಿಯ ಗುಣಮಟ್ಟ ಮಂಗಳವಾರ ಗಣನೀಯವಾಗಿ ಹದಗೆಟ್ಟಿದ್ದು, ಮತ್ತೆ ತೀವ್ರ ಮಟ್ಟಕ್ಕೆ ಕುಸಿತವಾದ ವೇಳೆಯಲ್ಲೇ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಟೀಕಿಸಿದ್ದಾರೆ.

ದೆಹಲಿಯಲ್ಲಿ ನಡೆದ ಹಿರಿಯ ಪತ್ರಕರ್ತ ಮತ್ತು ಮಾಜಿ ಕೇಂದ್ರ ಮಾಹಿತಿ ಆಯುಕ್ತ ಉದಯ್ ಮಹೂರ್ಕರ್ ಅವರ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದ ಅವರು, ನಾನು ಇಲ್ಲಿ ವಾರಕ್ಕೆ 2 ದಿನ ವಾಸಿಸುತ್ತಿದ್ದೇನೆ, ಈ ಮಾಲಿನ್ಯದಿಂದಾಗಿ ನನಗೆ ಸೋಂಕು ಬರುತ್ತದೆ ಎಂದಿದ್ದಾರೆ. ದೆಹಲಿ ಮಾಲಿನ್ಯದಿಂದ ತತ್ತರಿಸುತ್ತಿರುವುದು ಏಕೆ? ಎಂದು ಪ್ರಶ್ನಿಸಿದರು.
ದೆಹಲಿ ಮತ್ತು ಅದರ ಪಕ್ಕದ ಪ್ರದೇಶಗಳಲ್ಲಿ ಮಾಲಿನ್ಯಕ್ಕೆ ಸಾರಿಗೆಯು ಶೇಕಡಾ 40 ರಷ್ಟು ಕೊಡುಗೆ ನೀಡುತ್ತದೆ. ನಾನು ಸಾರಿಗೆ ಸಚಿವನಾಗಿ ಶೇಕಡಾ 40 ರಷ್ಟು ಮಾಲಿನ್ಯವು ಸಾರಿಗೆಯಿಂದಲೇ ಸಂಭವಿಸುತ್ತದೆ ಎಂದು ಹೇಳುತ್ತೇನೆ ಎಂದರು.