ಬೆಂಗಳೂರು, ಡಿ. 25 (DaijiworldNews/AA): ಕಾಂಗ್ರೆಸ್ ಪರಿಸ್ಥಿತಿ ಏನಾಗಿದೆ ಅಂತ ಪಟ್ಟಣ ಪಂಚಾಯತಿ ಚುನಾವಣೆಯಲ್ಲಿ ನೋಡಿದ್ದೇವೆ. ಎಲ್ಲಾ ಕಡೆ ಬಿಜೆಪಿ ಗೆದ್ದು ಬೀಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ತಿಳಿಸಿದ್ದಾರೆ.

ರಾಜ್ಯ ಬಿಜೆಪಿ ಕಚೇರಿಯಲ್ಲಿ ಇಂದು ಅಟಲ್ ಬಿಹಾರಿ ವಾಜಪೇಯಿ ಅವರ 101ನೇ ಜನ್ಮದಿನಾಚರಣೆ ಆಚರಿಸಲಾಯಿತು. ಈ ವೇಳೆ ಮಾತನಾಡಿದ ಅವರು, "ಅಟಲ್ ಅವರ ಹೆಸರನ್ನು ಕೇಳಿದಾಗ ನಮಗೆ ರಣೋತ್ಸಾಹ ಬರುತ್ತದೆ. ಅವರದ್ದು ಶ್ರೇಷ್ಠ ವ್ಯಕ್ತಿತ್ವ. ವಾಜಪೇಯಿ ಅವರಿಗೆ ಕರ್ನಾಟಕಕ್ಕೆ ಅವಿನಾಭಾವ ಸಂಬಂಧ ಇದೆ. ಹಲವು ಬಾರಿ ಕರ್ನಾಟಕ ಪ್ರವಾಸ ಮಾಡಿ ರಾಜ್ಯ ಬಿಜೆಪಿ ಹಿರಿಯ ನಾಯಕರಿಗೆ ಪ್ರೇರಣೆ ನೀಡಿದ್ರು" ಎಂದು ಹೇಳಿದರು.
"ಇನ್ನು ಕಾಂಗ್ರೆಸ್ ಅವರಿಗೆ ಮೊದಲಿನಿಂದಲೂ ಲೂಟಿ ಮಾಡೋದು ಬಿಟ್ಟು ಬೇರೇನು ಗೊತ್ತಿಲ್ಲ. ಬಿಜೆಪಿ ಅಲ್ಪಸಂಖ್ಯಾತ ವಿರೋಧಿ ಅಂತ ಕಾಂಗ್ರೆಸ್ ಅವರು ಹೇಳ್ತಾರೆ. ಮೋದಿ, ಬಿಜೆಪಿ ಅಲ್ಪಸಂಖ್ಯಾತರ ವಿರೋಧಿ ಅಲ್ಲ. ಯಾರು ಪಾಕಿಸ್ತಾನ ಜಿಂದಾಬಾದ್ ಅಂತಾರೊ ಅವರ ವಿರೋಧಿ. ವೋಟ್ ಚೋರಿ ಅಂತ ಕಾಂಗ್ರೆಸ್ ಅವರು ಏನೇ ಆರೋಪ ಮಾಡ್ಲಿ ಆದ್ರೆ 11 ವರ್ಷಗಳ ಮೋದಿ ಆಡಳಿತದಲ್ಲಿ ಯಾವುದೇ ವಿಪಕ್ಷ ಕೂಡ ಕೇಂದ್ರ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಲು ಆಗಿಲ್ಲ. ಕಾಂಗ್ರೆಸ್ ತನ್ನ ಅಸ್ತಿತ್ವ ಕಳೆದುಕೊಳ್ತಿದೆ" ಎಂದರು.