ನವದೆಹಲಿ, ಜು12(Daijiworld News/SS): ಆಧಾರ್ ಮತ್ತು ಪ್ಯಾನ್ ಕಾರ್ಡ್ಗಳನ್ನು ನಿಮ್ಮ ವಿವಿಧ ಸೇವೆಗಳಿಗೆ ಲಿಂಕ್ ಮಾಡಲು ಈ ಹಿಂದೆ ಕೇಂದ್ರ ಸರ್ಕಾರ ನೀಡಿದ್ದ ಗಡುವನ್ನು ವಿಸ್ತರಣೆ ಮಾಡಿದೆ. ಒಂದು ವೇಳೆ ಪ್ಯಾನ್ ಕಾರ್ಡ್ಗೆ ಆಧಾರ್ ಲಿಂಕ್ ಮಾಡಿಲ್ಲದಿದ್ದರೆ ಪ್ಯಾನ್ಕಾರ್ಡ್ ಅಮಾನ್ಯಗೊಳ್ಳಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಆಧಾರ್ ಕಾರ್ಡ್ಗೆ ಲಿಂಕ್ ಮಾಡಿಲ್ಲದ ಎಲ್ಲ ಪ್ಯಾನ್ ಕಾರ್ಡ್ಗಳನ್ನೂ ಸೆಪ್ಟೆಂಬರ್1 ರ ನಂತರ ಅಮಾನ್ಯಗೊಳಿಸಲು ಸರ್ಕಾರ ನಿರ್ಧರಿಸಿದೆ. ಸದ್ಯ 40 ಕೋಟಿ ಪ್ಯಾನ್ ಕಾರ್ಡ್ಗಳ ಪೈಕಿ 18 ಕೋಟಿ ಪ್ಯಾನ್ ಕಾರ್ಡ್ಗಳು ಲಿಂಕ್ ಆಗಿಲ್ಲ. ಹೀಗಾಗಿ ಆಗಸ್ಟ್ 31ರೊಳಗೆ ಎಲ್ಲ ಪ್ಯಾನ್ ಕಾರ್ಡ್ಗಳನ್ನೂ ಆಧಾರ್ ಜೊತೆಗೆ ಲಿಂಕ್ ಮಾಡಬೇಕಿದೆ.
ಇಲ್ಲವಾದರೆ ಆಧಾರ್ ಕಾರ್ಡ್ ಅನ್ನೇ ರಿಟರ್ನ್ಸ್ ಫೈಲಿಂಗ್ಗೆ ಬಳಸಬಹುದಾಗಿದೆ. ಒಂದು ವೇಳೆ ರಿಟರ್ನ್ಸ್ ಫೈಲಿಂಗ್ಗೆ ಬಳಸಿದ ಆಧಾರ್ ಕಾರ್ಡ್ಗೆ ಪ್ಯಾನ್ ಲಿಂಕ್ ಮಾಡಿಲ್ಲದೇ ಇದ್ದರೆ, ಹೊಸ ಪ್ಯಾನ್ ಕಾರ್ಡ್ ಅನ್ನು ಆದಾಯ ತೆರಿಗೆ ಇಲಾಖೆ ಆಧಾರ್ ಕಾರ್ಡ್ದಾರರಿಗೆ ನೀಡಲಿದೆ. ಇದನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ಆಧಾರ್ ಬಳಕೆದಾರರು ಡೌನ್ಲೋಡ್ ಮಾಡಿಕೊಂಡು ಬಳಸಬಹುದು.
ಇದುವರೆಗೂ ಆಧಾರ್ ಜೊತೆ ಪ್ಯಾನ್ ಸಂಖ್ಯೆ ಲಿಂಕ್ ಮಾಡದೇ ಇರುವವರು 2019ರ ಸೆ.01ರೊಳಗೆ ಲಿಂಕ್ ಮಾಡಲು ಅವಕಾಶ ನೀಡಿದೆ. ಬಜೆಟ್ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಈ ಕುರಿತು ವಿವರಿಸಿದ್ದು, ಇದನ್ನೇ ಹಣಕಾಸು ಮಸೂದೆಯಲ್ಲೂ ವಿವರಿಸಲಾಗಿದೆ.
ಆಧಾರ್ ಜೊತೆ ಪ್ಯಾನ್ ಜೋಡಣೆ ಮಾಡುವತನಕ ತೆರಿಗೆ, ಬ್ಯಾಂಕಿಂಗ್, ಹಣಕಾಸು ವ್ಯವಹಾರಗಳಿಗೆ ತೊಡಕಾಗುವ ಅವಕಾಶಗಳಿವೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.