ಬೆಂಗಳೂರು, ಜು 12 (Daijiworld News/MSP): ರಾಜೀನಾಮೆ ನೀಡಿರುವ ಅತೃಪ್ತ ಶಾಸಕರಲ್ಲಿ ಇಂದು ಮೂವರು ಶಾಸಕರು ಸ್ಪೀಕರ್ ರಮೇಶ್ ಕುಮಾರ್ ಎದುರು ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ.
ಕ್ರಮ ಬದ್ಧ ರಾಜೀನಾಮೆ ನೀಡಿರುವ ಶಾಸಕರಾದ ಪ್ರತಾಪ್ ಗೌಡ ಪಾಟೀಲ್, ಆನಂದ್ ಸಿಂಗ್ ಮತ್ತು ನಾರಾಯಣಗೌಡ ವಿಚಾರಣೆಗೆ ಇಂದು ಮಧ್ಯಾಹ್ನ ಸುಮಾರು 3 ಗಂಟೆಗೆ ಸ್ಪೀಕರ್ ಕಚೇರಿಗೆ ಆಗಮಿಸಬೇಕಾಗಿದೆ.
ರಾಜೀನಾಮೆಗೆ ಕಾರಣ, ಹಾಗೂ ರಾಜೀನಾಮೆ ನೀಡಲು ಯಾರಾದ್ದಾದರೂ ಒತ್ತಡವಿದೆಯೇ, ಅಥವಾ ಅವರ ಇಚ್ಚಾನುಸಾರ ರಾಜೀನಾಮೆ ನೀಡಿದ್ದಾರೆಯೇ ಇತ್ಯಾದಿ ವಿಚಾರವಾಗಿ ಸ್ಪೀಕರ್ ಅವರನ್ನು ವಿಚಾರಣೆ ನಡೆಸಲಿದ್ದಾರೆ.
ಶುಕ್ರವಾರ 4 ಗಂಟೆಗೆ ಸ್ಪೀಕರ್ ರಮೇಶ್ ಕುಮಾರ್ ಮೂವರು ಶಾಸಕರ ವಿಚಾರಣೆ ನಡೆಸಲಿದ್ದಾರೆ. "ಶಾಸಕರ ಸಹಕಾರ ಸಿಕ್ಕಿದರೆ ಒಂದು ವಾರದಲ್ಲೇ ವಿಚಾರಣೆ ಮುಗಿಸಬಹುದು. ಇಲ್ಲದಿದ್ದರೆ ಒಂದು ತಿಂಗಳೂ ಆಗಬಹುದು" ಎಂದು ವಿಚಾರಣೆ ಬಗ್ಗೆ ಸ್ಪೀಕರ್ ಪ್ರತಿಕ್ರಿಯಿಸಿದ್ದಾರೆ.